Kannada News Now

1.7M Followers

Teacher Jobs: 'ಶಿಕ್ಷಕರ ಹುದ್ದೆ' ಆಕಾಂಕ್ಷಿಗಳೇ ಗಮನಿಸಿ: ಮಾ.7ರಿಂದ 'ಕೇಂದ್ರೀಯ ವಿದ್ಯಾಲಯ'ದ ಶಿಕ್ಷಕರ ಹುದ್ದೆಗಳ ನೇರಭರ್ತಿಗೆ ಸಂದರ್ಶನ

02 Mar 2022.08:53 AM

ಬೆಂಗಳೂರು: ಕೇಂದ್ರೀಯ ವಿದ್ಯಾಲಯದಲ್ಲಿ ( Kendria Vidyalaya ) ಖಾಲಿ ಇರುವಂತ ಅರೆಕಾಲಿಕ ಶಿಕ್ಷಕರ ಹುದ್ದೆಯ ( Guest Teacher Job ) ನೇಮಕಾತಿಗಾಗಿ ನೇರ ಸಂದರ್ಶನ ದಿನಾಂಕ 07-03-2022ರಿಂದ ಆರಂಭಗೊಳ್ಳಲಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು, 2022-23ನೇ ಸಾಲಿಗೆ ಒಪ್ಪಂದದ ಆಧಾರದ ಮೇಲೆ ಅರೆಕಾಲಿಕ ಶಿಕ್ಷಕರ ನೇಮಕಾತಿಗೆ ಕೇಂದ್ರೀಯ ವಿದ್ಯಾಲಯ, ಎಂಈಜಿ ಮತ್ತು ಕೇಂದ್ರ, ಬೆಂಗಳೂರು ಇಲ್ಲಿ ನೇರ ಸಂದರ್ಶನ ( Walk In Interview ) ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿನಾಂಕ 07-03-2022 ಮತ್ತು 08-03-2022ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂದರ್ಶನ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶಿಕ್ಷಣ ಪ್ರಮಾಣ ಪತ್ರದ ಪ್ರತಿಯೊಂದಿಗೆ ಹಾಗೂ 2 ಭಾವಚಿತ್ರದೊಂದಿಗೆ ಹಾಜರಾಗಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು megcentre.kvs.ac.in ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿ ಎಂದು ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags