Kannada News Now
1.7M Followers ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಗೆ ರೂಪಿಸಿದ್ದ ಶಿಕ್ಷಕ ಮಿತ್ರ ಮೊಬೈಲ್ ಆಯಪ್ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಸೆ.15 ರಂದು ಕಂಪ್ಯೂಟರ್ ಮೂಲಕವೇ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿದೆ.
weather Update : ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್' ಘೋಷಣೆ
ತಾಂತ್ರಿಕ ಕಾರಣ, ಗ್ರಾಮೀಣ ಭಾಗದ ಶಿಕ್ಷಕರಿಗೆ ತಾಂತ್ರಿಕ ಜ್ಞಾನ ಕೊರತೆಯಿಂದಾಗಿ ಶಿಕ್ಷಕ ಮಿತ್ರ ಮೊಬೈಲ್ ಬದಲು ಕಂಪ್ಯೂಟರ್ ಮೂಲಕವೇ ಪ್ರತಿ ವರ್ಷದಂತೆ ಕೌನ್ಸೆಲಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ವರ್ಗಾವಣೆ ಕೋರಿ 71 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ಶಿಕ್ಷಣ ಇಲಾಖೆಯು ಸೆಪ್ಟೆಂಬರ್ 8 ರವರೆಗೆ ವಿಸ್ತರಿಸಿದೆ.
ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ : ಸೆ.5 ರಂದು `ರೈತ ವಿದ್ಯಾನಿಧಿ' ಯೋಜನೆಗೆ ಚಾಲನೆ
ಇನ್ನು ಕಳೆದ ವರ್ಷದ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಪಡೆದ 3 ಸಾವಿರ ಶಿಕ್ಷಕರಿಗೆ ಈ ಬಾರಿ ಕೌನ್ಸೆಲಿಂಗ್ ನಡೆಸಿ ಮೊದಲು ಸ್ಥಳ ಆಯ್ಕೆಗೆ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.
Disclaimer
This story is auto-aggregated by a computer program and has not been created or edited by Dailyhunt Publisher: Kannada News Now