Dailyhunt
ತೆರಿಗೆ ಪಾವತಿದಾರರೇ ಗಮನಿಸಿ : ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ

ತೆರಿಗೆ ಪಾವತಿದಾರರೇ ಗಮನಿಸಿ : ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ

Kannada News Now 4 years ago

ನವದೆಹಲಿ: ಆದಾಯ ತೆರಿಗೆದಾರರಿಗೆ ಭಾರತೀಯ ಅಂಚೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಇಂಡಿಯಾ ಪೋಸ್ಟ್ ಈಗ ಹತ್ತಿರದ ಅಂಚೆ ಕಚೇರಿ ಸಾಮಾನ್ಯ ಸೇವೆಗಳ ಕೇಂದ್ರಗಳು (ಸಿಎಸ್ ಸಿ) ಕೌಂಟರ್ ಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಪಾವತಿಸುವ ಆಯ್ಕೆಯನ್ನು ನೀಡುತ್ತಿದೆ.

ಈ ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ಅವಾಯ್ಡ್ ಮಾಡಿ!!

ತೆರಿಗೆದಾರರು ಹತ್ತಿರದ ಅಂಚೆ ಕಚೇರಿ ಸಿಎಸ್ ಸಿ ಕೌಂಟರ್ ನಲ್ಲಿ ಐಟಿಆರ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಈಗ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೆಚ್ಚು ದೂರ ಪ್ರಯಾಣಿಸುವ ಅಗತ್ಯವಿಲ್ಲ ಎಂದು ಇಂಡಿಯಾ ಪೋಸ್ಟ್ ಹೇಳಿದೆ.

ಎರಡೂ ಡೋಸ್ ಲಸಿಕೆ ಪಡೆದ ಪ್ರಯಾಣಿಕರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ : ಮಹಾರಾಷ್ಟ್ರ ಸರ್ಕಾರ ಆದೇಶ

ಅಂಚೆ ಕಚೇರಿಯ ಸಿಎಸ್ ಸಿ ಕೌಂಟರ್ ಗಳು ಭಾರತದಾದ್ಯಂತ ಭಾರತೀಯ ನಾಗರಿಕರಿಗೆ ಅಂಚೆ, ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳಂತಹ ಹಲವಾರು ಹಣಕಾಸು ಸೇವೆಗಳನ್ನು ಪಡೆಯಲು ಒಂದೇ ಪ್ರವೇಶ ಬಿಂದುವಾಗಿ ಕಾರ್ಯನಿರ್ವಹಿಸುತ್ತವೆ.

ಜನರು ಸಿಎಸ್ ಸಿ ಕೌಂಟರ್ ಗಳ ಮೂಲಕ ಹಲವಾರು ಇತರ ಸರ್ಕಾರಿ ಪ್ರಯೋಜನಗಳು ಮತ್ತು ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದೆ.







Dailyhunt
Disclaimer: This content has not been generated, created or edited by Dailyhunt. Publisher: Kannada News Now