Sunday, 11 Apr, 1.35 pm Kannada News Now

ಹೋಮ್
ಉಪ ಚುನಾವಣೆ ಹೊತ್ತಿನಲ್ಲೇ 'ಜೆಡಿಎಸ್'ಗೆ ಬಿಗ್ ಶಾಕ್ : 'ಮಾಜಿ ಶಾಸಕ ಪ್ರಕಾಶ್ ಖಂಡ್ರೆ' ಬಿಜೆಪಿ ಸೇರ್ಪಡೆ

ಬಸವಕಲ್ಯಾಣ : ಈ ಹಿಂದೆ ಬಿಜೆಪಿಯಲ್ಲಿದ್ದು, ಶಾಸಕರಾಗಿದ್ದಂತ ಪ್ರಕಾಶ್ ಖಂಡ್ರೆ ಅವರು, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇಂತಹ ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಈಗ ಜೆಡಿಎಸ್ ತೊರೆದು, ಮತ್ತೆ ತಮ್ಮ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಜೆಡಿಎಸ್ ಗೆ ಬಿಗ್ ಶಾಕ್ ಅನ್ನು ಉಪ ಚುನಾವಣೆಯ ಸಂದರ್ಭದಲ್ಲೇ ನೀಡಿದ್ದಾರೆ.

ಬಾಲ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಇಂದು ಬಸವಕಲ್ಯಾಣದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಜೆಡಿಎಸ್ ತೊರೆದು, ತಮ್ಮ ಮಾತೃ ಪಕ್ಷಕ್ಕೆ ಮತ್ತೆ ಮರಳಿರೋದು ಬಿಜೆಪಿಗೆ ಉಪ ಚುನಾವಣೆಯ ಹೊತ್ತಿನಲ್ಲೇ ಮತ್ತಷ್ಟು ಬಲ ಬಂದಂತೆ ಆಗಿದ್ದರೇ, ಜೆಡಿಎಸ್ ಗೆ ಶಾಕ್ ನೀಡಿದಂತೆ ಆಗಿದೆ.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜು ಬೊಮ್ಮಾಯಿ, ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವರಾದ ವಿ ಸೋಮಣ್ಣ ಉಪಸ್ಥಿತರಿದ್ದರು.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top