Thursday, 29 Oct, 6.08 am Kannada News Now

ಭಾರತ
UPSC ಮೇನ್ಸ್ ಪರೀಕ್ಷೆ 2020 : ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್ ಸಿ ಮುಖ್ಯ ಪರೀಕ್ಷೆ 2020ಯ ಅರ್ಜಿ ನಮೂನೆಯನ್ನ ಬಿಡುಗಡೆ ಮಾಡಿದ್ದು, ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಮುಖ್ಯ ಪರೀಕ್ಷೆಯ ಅರ್ಜಿಯನ್ನ ಭರ್ತಿ ಮಾಡಬಹುದು.

2020ರ ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಇಂದು ವಿವರವಾದ ಅರ್ಜಿ ನಮೂನೆ (DAF)ಯನ್ನ ಬಿಡುಗಡೆ ಮಾಡಿದೆ. ಈ upsc.gov.in.ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನ ಭರ್ತಿ ಮಾಡಬಹುದು.

ವಿವರವಾದ ಅರ್ಜಿ ನಮೂನೆಯನ್ನ ಭರ್ತಿ ಮಾಡಲು ನವೆಂಬರ್ 11 ಕೊನೆಯ ದಿನಾಂಕವಾಗಿದ್ದು, ಈ ನಮೂನೆಯು ಆಯೋಗದ ವೆಬ್ ಸೈಟ್ DAF (CSM) ನಲ್ಲಿ ಸಂಜೆ 6 ಗಂಟೆಯವರೆಗೆ ಲಭ್ಯವಿರುತ್ತೆ.

ಯುಪಿಎಸ್ ಸಿ ಮುಖ್ಯ ಪರೀಕ್ಷೆ DAF ಫಾರ್ಮ್ ಭರ್ತಿ ಮಾಡಲು, ಮೊದಲಿಗೆ, ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ತಮ್ಮನ್ನ ನೋಂದಾಯಿಸಿಕೊಳ್ಳಬೇಕು. ಇದಾದ ನಂತರ, ಅವರು ಲಾಗಿನ್ ಐಡಿ ಮತ್ತು ಪಾಸ್ ವರ್ಡ್ʼನ್ನ ಕೂಡ ಜನರೇಟ್ ಮಾಡಬೇಕು. ಅದ್ರ ಸಹಾಯದಿಂದ ಈ ಫಾರ್ಮ್ʼನ್ನ ಭರ್ತಿ ಮಾಡಬಹುದು.

ಪ್ರಮುಖ ದಿನಾಂಕಗಳು

ಯುಪಿಎಸ್ಸಿ ಐಎಎಸ್ ಡಿಎಎಫ್ ಫಾರ್ಮ್ ಭರ್ತಿ ದಿನಾಂಕ - ಅಕ್ಟೋಬರ್ 28 ರಿಂದ ನವೆಂಬರ್ 11.

ಯುಪಿಎಸ್ ಸಿ ಐಎಫ್ ಎಸ್ ಡಿಎಎಫ್ ಅರ್ಜಿ ಭರ್ತಿ ದಿನಾಂಕ - ನವೆಂಬರ್ 16 ರಿಂದ ನವೆಂಬರ್ 27.

ಯುಪಿಎಸ್ಸಿ ಐಎಎಸ್ ಮುಖ್ಯ ಪರೀಕ್ಷೆ ದಿನಾಂಕ - 8 ಜನವರಿ 2021.

ಯುಪಿಎಸ್ ಸಿ ಐಎಫ್ ಎಸ್ ಮುಖ್ಯ ಪರೀಕ್ಷೆ ದಿನಾಂಕ - 28 ಫೆಬ್ರವರಿ ಯಿಂದ 7 ಮಾರ್ಚ್ 2021.

ಇತರ ಪ್ರಮುಖ ಮಾಹಿತಿ

ಯುಪಿಎಸ್ ಸಿ ಪರೀಕ್ಷೆ 2020 ಜನವರಿ 8 ರಂದು ಪರೀಕ್ಷಾ ಕೇಂದ್ರಗಳಲ್ಲಿ ದೇಶಾದ್ಯಂತ ನಡೆಯಲಿದೆ. ಇ-ಪ್ರವೇಶ ಪತ್ರದ ಜೊತೆಗೆ ಅದರ ವಿವರವಾದ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಾಗುವುದು. ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾದ ನೋಟಿಸ್ ನಲ್ಲಿ, ಪರೀಕ್ಷಾ ಕೇಂದ್ರಗಳನ್ನ ಉಲ್ಲೇಖಿಸಲಾಗಿದೆ, ಆದ್ರೆ, ಯಾವುದೇ ಕೇಂದ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ, ಅಲ್ಲಿ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಸಂಬಂಧ ಆಯೋಗದ ತೀರ್ಮಾನವೇ ಅಂತಿಮವಾಗಲಿದೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top