Dailyhunt
ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!

ಉತ್ತರ ಪ್ರದೇಶದ ಮದುವೆ ಮಂಟಪದ ಭರ್ಜರಿ ಡಿಜೆ ಸೌಂಡ್‌ಗೆ 140 ಕೋಳಿಗಳು ಬಲಿ!

Kannada News Now 2 weeks ago

​ಸುಲ್ತಾನ್‌ಪುರ (ಉತ್ತರ ಪ್ರದೇಶ): ಮದುವೆ ಸಮಾರಂಭವೊಂದರಲ್ಲಿ ಅತಿಯಾದ ಶಬ್ದದೊಂದಿಗೆ ಮೊಳಗಿದ ಡಿಜೆ (DJ) ಸಂಗೀತಕ್ಕೆ ಬರೋಬ್ಬರಿ 140 ಕೋಳಿಗಳು ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ದರಿಯಾಪುರ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಕೋಳಿ ಫಾರಂ ಮಾಲೀಕ ನೀಡಿದ ದೂರಿನ ಮೇರೆಗೆ ಪೊಲೀಸರು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಏಪ್ರಿಲ್ 25ರಂದು ದರಿಯಾಪುರ ಗ್ರಾಮದ ಬಬ್ಬನ್ ವಿಶ್ವಕರ್ಮ ಎಂಬುವವರ ಮಗಳ ಮದುವೆಯ ಮೆರವಣಿಗೆ ಸಬೀರ್ ಅಲಿ ಎಂಬುವವರ ಕೋಳಿ ಫಾರಂ ಮುಂಭಾಗದಿಂದ ಸಾಗಿತ್ತು. ಈ ವೇಳೆ ಡಿಜೆಯಲ್ಲಿ ಅತಿಯಾದ ವಾಲ್ಯೂಮ್ ಇಟ್ಟು ಹಾಡುಗಳನ್ನು ಹಾಕಲಾಗಿತ್ತು.

ಮೆರವಣಿಗೆ ಸಾಗುತ್ತಿದ್ದಂತೆ ಕೋಳಿಗಳು ತೀವ್ರ ಆತಂಕಕ್ಕೆ (Panic) ಒಳಗಾದವು. ಮೆರವಣಿಗೆ ಮುಗಿದ ಕೆಲವೇ ಕ್ಷಣಗಳಲ್ಲಿ ಫಾರಂನಲ್ಲಿದ್ದ 140 ಕೋಳಿಗಳು ಸ್ಥಳದಲ್ಲೇ ಮೃತಪಟ್ಟಿವೆ.

"ಶಬ್ದ ಎಷ್ಟಿತ್ತೆಂದರೆ ಕೋಳಿಗಳು ಹೆದರಿ ದಿಕ್ಕಾಪಾಲಾಗಿ ಓಡತೊಡಗಿದವು ಮತ್ತು ಕ್ಷಣಾರ್ಧದಲ್ಲಿ ಪ್ರಾಣಬಿಟ್ಟವು. ಇದರಿಂದ ನನಗೆ ಭಾರಿ ಆರ್ಥಿಕ ನಷ್ಟವಾಗಿದೆ" ಎಂದು ಫಾರಂ ಮಾಲೀಕ ಸಬೀರ್ ಅಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಬೀರ್ ಅಲಿ ನೀಡಿದ ದೂರಿನನ್ವಯ ಪೊಲೀಸರು ಡಿಜೆ ಆಪರೇಟರ್ ಕವಿ ಯಾದವ್ ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now