Thursday, 16 Sep, 9.47 pm Kannada News Now

ಕರ್ನಾಟಕ
VACCINE DRIVE : ನಾಳೆ ವಿಶೇಷ ಮಹಾ ಲಸಿಕೆ ಅಭಿಯಾನ : 'ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ದಿನ 5 ಲಕ್ಷ ಡೋಸ್ ಹಂಚಿಕೆ ಗುರಿ

ಬೆಂಗಳೂರು : ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 4.8 ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ. ಲಸಿಕಾಕರಣವನ್ನು ಮತ್ತಷ್ಟು ಚುರುಕುಗೊಳಿಸೋ ನಿಟ್ಟಿನಲ್ಲಿ, ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳವನ್ನು ( Bruhath Covid19 Vaccine Mela ) ಹಮ್ಮಿಕೊಳ್ಳಲಾಗಿದೆ.

ಹೌದು.. ನಾಳೆ ರಾಜ್ಯಾಧ್ಯಂತ ಬೃಹತ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ದಿನಾಂಕ 17-09-2021ರಂದು ಹಮ್ಮಿಕೊಂಡಿರುವಂತ ಬೃಹತ್ ಲಸಿಕಾ ಮೇಳಕ್ಕಾಗಿ ಜಿಲ್ಲೆಗಳಿಗೆ 34 ಲಕ್ಷ ಕೋವಿಡ್-19 ಲಸಿಕಾ ಡೋಸ್ ಗಳನ್ನು ಸರಬರಾಜು ಮಾಡಲಾಗಿದೆ.

Karnataka Covid19 Update : ರಾಜ್ಯದಲ್ಲಿ ಇಂದು 1,108 ಜನರಿಗೆ ಕೊರೋನಾ, 18 ಸೋಂಕಿತರು ಸಾವು

ನಾಳೆ ರಾಜ್ಯದಲ್ಲಿ ಬೃಹತ್ ಲಸಿಕಾ ಅಭಿಯಾನ ವಿಚಾರವಾಗಿ ಮಾತನಾಡಿದ ಗೌರವ್ ಗುಪ್ತಾ, ನಾಳೆ ವಿಶೇಷ ಮಹಾ ಲಸಿಕೆ ಅಭಿಯಾನ ನಡೆಯಲಿದೆ. ಐದು ಲಕ್ಷ ಲಸಿಕೆ ವಿತರಿಸುವ ಗುರಿ ಇಟ್ಟುಕೊಂಡಿದ್ದೇವೆ. ನಾಳೆ ನಗರದಾದ್ಯಂತ ಖಾಸಗಿ ಆಸ್ಪತ್ರೆ ಯಲ್ಲಿ ಬಿಬಿಎಂಪಿ ಬ್ಯಾನರ್ ನಲ್ಲಿ ಲಸಿಕೆ ನೀಡಲಾಗುವುದು. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಅಂದರೆ ಸತತ 12 ತಾಸು ಲಸಿಕೆ ಅಭಿಯಾನ ನಡೆಯಲಿದೆ ಎಂದಿದ್ದಾರೆ. ನಾಳೆ ಲಸಿಕೆ ಕೇಂದ್ರಗಳು ಒಟ್ಟಾರೆ ಕೋವ್ಯಾಕ್ಸಿನ್ - 1 ಲಕ್ಷ ಡೋಸ್ ಹಾಗೂ ಕೋವಿಶೀಲ್ಡ್ - 4 ಲಕ್ಷ ಡೋಸ್ ನೀಡಲಿವೆ ಎಂದು ಮಾಹಿತಿ ಈವರೆಗೆ ರಾಜ್ಯದಲ್ಲಿ ಒಟ್ಟು 4.8 ಕೋಟಿ‌ ಡೋಸ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಶೇ. 73 ರಷ್ಟು ಮೊದಲ ಡೋಸ್ ಹಾಗೂ ಶೇ. 27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ನಾಳೆಯ ಲಸಿಕೆ ಅಭಿಯಾನಕ್ಕೆ‌ 34 ಲಕ್ಷ ಡೋಸ್ ಮೀಸಲಿಡಲಾಗಿದೆ. ರಾಜ್ಯಾದ್ಯಂತ 12,700 ಸರ್ಕಾರಿ ಲಸಿಕಾ ಕೇಂದ್ರ, 300 ಖಾಸಗಿ ಕೇಂದ್ರಗಳು ಹಾಗೂ 14,666 ಲಸಿಕಾ ಕೇಂದ್ರದಲ್ಲಿ ಲಸಿಕೆ ಹಂಚಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.

ಅಧಿವೇಶನದ ಮುಗಿದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶೀಘ್ರವೇ 1,801 ಸಹ ಶಿಕ್ಷಕರ ನೇಮಕ - ಸಚಿವ ಬಿ.ಸಿ.ನಾಗೇಶ್

ಈಗಾಗಲೇ ಎಲ್ಲಾ ಜಿಲ್ಲೆಗಳ ಕಟ್ಟ ಕಡೆಯ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಲಸಿಕೆ ತಲುಪಿಸೋ ಕಾರ್ಯ ಭರದಿಂದ ಸಾಗಿದ್ದು, ಲಸಿಕೆ ಪಡೆಯಬೇಕಾದ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳಿಗೆ ಗುರಿಯನ್ನು ನಿಗಧಿಪಡಿಸಲಾಗಿದೆ. ಜೊತೆಗೆ ಆದ್ಯತೆ ಗುಂಪುಗಳಿಗೆ ವಿಶೇಷ ಒತ್ತು ಕೂಡ ನೀಡಲಾಗಿದೆ.

ಇಬ್ಬರು ವಯಸ್ಕರು ತಮ್ಮ ಧರ್ಮದ ಹೊರತಾಗಿಯೂ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ : ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಇನ್ನೂ, ಜಿಲ್ಲಾ ಮಟ್ಟದ ವೈದ್ಯಕೀಯ ವಿದ್ಯಾಲಯಗಳು, ನರ್ಸಿಂಗ್ ಶಾಲೆಗಳು ಮತ್ತು ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳ ಬೆಂಬಲ ಪಡೆಯಲಾಗುತ್ತಿದೆ. ಇತರೆ ಎಲ್ಲಾ ಇಲಾಖೆಗಳು ಬೃಹತ್ ಲಸಿಕಾ ಮೇಳದಲ್ಲಿ ( Corona Vaccine ) ಸಕ್ರಿಯವಾಗಿ ಭಾಗವಹಿಸಿ, ಸಹಕಾರ ನೀಡುವಂತೆ ಆರೋಗ್ಯ ಇಲಾಖೆ ಕೋರಿದೆ.

ಸವಾಲುಗಳ ಮೀರಿ ಸಕ್ಸಸ್ ಕಂಡ 'ಗ್ರೂಫಿ' : ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫಿದಾ

ಅಂದಹಾಗೇ ದಿನಾಂಕ 17-09-2021ರ ಬೃಹತ್ ಲಸಿಕಾ ಮೇಳಕ್ಕೆ 12,700 ಸರ್ಕಾರಿ ಕೋವಿಡ್-19 ಲಸಿಕಾ ಕೇಂದ್ರಗಳು, 300 ಖಾಸಗಿ ಕೋವಿಡ್-19 ಲಸಿಕಾ ಕೇಂದ್ರಗಳು ಹಾಗೂ 14,666 ಲಸಿಕಾ ಸತ್ರಗಳು ಕಾರ್ಯಪ್ರವೃತ್ತವಾಗಲಿವೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top