Thursday, 04 Mar, 9.23 am Kannada News Now

ಕರ್ನಾಟಕ
ವಿಧಾನ ಪರಿಷತ್‌ನಲ್ಲಿ ಮೊಬೈಲ್ ಫೋನ್‌ ಬಳಕೆ ಬ್ಯಾನ್‌: ಸಭಾಪತಿ ಬಸವರಾಜ್‌ ಹೊರಟ್ಟಿ ಆದೇಶ

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕೆಲ ಸದ್ಯಸರು ಸದನ ನಡೆಯುವ ವೇಳೆಯಲ್ಲಿ ಮೊಬೈಲ್‌ ಬಳಕೆಗೆ ಸಂಬಂಧಪಟ್ಟಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ನೂತನ ಸಭಾಪತಿ ಬಸವರಾಜ್‌ ಹೊರಟ್ಟಿ ಇನ್ಮುಂದೆ ಸದನದಲ್ಲಿ ಸದ್ಯಸರು ಮೊಬೈಲ್‌ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದಾರೆ.

ಇಂದಿನಿಂದ ಬಜೆಟ್‌ ಅಧೀವೇಶನ ಶುರುವಾಗಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸದ್ಯಸರು ಮೊಬೈಲ್‌ ತರದಂತೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಸಭಾನಾಯಕರು, ಸಚೇತಕರು ಹಾಗು ಸದ್ಯಸರ ಜೊತೆಗೆ ಚರ್ಚೆ ನಡೆಸಿ ಸದನ ಘನತೆಗೆ ಕಪ್ಪು ಚುಕ್ಕೆ ಬಾರದ ಹಾಗೇ ನಡೆದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಅಂತ ಹೇಳಿದ್ದಾರೆ.



Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top