Dailyhunt Logo
  • Light mode
    Follow system
    Dark mode
    • Play Story
    • App Story
ವಿಧಾನಸಭೆ ಅಧಿವೇಶನ ಆರಂಭ : 20 ಶಾಸಕರಿಗೆ ಕೊರೊನಾ ಪಾಸಿಟಿವ್

ವಿಧಾನಸಭೆ ಅಧಿವೇಶನ ಆರಂಭ : 20 ಶಾಸಕರಿಗೆ ಕೊರೊನಾ ಪಾಸಿಟಿವ್

Kannada News Now 6 years ago

ಬೆಂಗಳೂರು : ಕೊರೊನಾ ವೈರಸ್ ಆತಂಕದ ನಡುವೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೂ ಮುನ್ನ ನಡೆದ ಕೋವಿಡ್ ಪರೀಕ್ಷೆಯಲ್ಲಿ 20 ಕ್ಕೂ ಅಧಿಕ ಶಾಸಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಬಿಜೆಪಿಯ 9 ಶಾಸಕರು, ಕಾಂಗ್ರೆಸ್ ನ 8 ಶಾಸಕರು ಹಾಗೂ ಜೆಡಿಎಸ್ ನ ಮೂವರು ಶಾಸಕರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ರಘು ಆಚಾರ್ ಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಬಿಜೆಪಿಯ ಡಿಸಿಎಂ ಅಶ್ವತ್ಥ್ ನಾರಾಯಣ, ಸಚಿವರಾದ ಬಸವರಾಜ್ ಬೊಮ್ಮಾಯಿ, ಗೋಪಾಲಯ್ಯ, ಭೈರತಿ ಬಸವರಾಜ್, ಪ್ರಭು ಚೌಹಾಣ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂ.ಪಿ. ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಾಂಗ್ರೆಸ್ ನ ಎನ್.ಎ.

ಹ್ಯಾರೀಸ್, ಹೆಚ್.ಪಿ. ಮಂಜುನಾಥ್, ಬಿ.ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ಪ್ರೀಯಾಂಕ್ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ. ಸುರೇಶ್ ಕುಮಾರ್ ಅವರಿಗೆ ಕೊರೊನಾ ದೃಢಪಟ್ಟಿದೆ. ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ, ಡಿ.ಸಿ. ಗೌರಿ ಶಂಕರ್ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿಧಾನಸೌಧ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now