Dailyhunt Logo
  • Light mode
    Follow system
    Dark mode
    • Play Story
    • App Story
ವಿದ್ಯಾರ್ಥಿ ಪ್ರತಿಭಟನೆ ಹಿಂಸಾಚಾರಕ್ಕೆ ಅಮಿತ್ ಶಾ ಹೊಣೆ: ರಾಹುಲ್ ಗಾಂಧಿ ಆರೋಪ

ವಿದ್ಯಾರ್ಥಿ ಪ್ರತಿಭಟನೆ ಹಿಂಸಾಚಾರಕ್ಕೆ ಅಮಿತ್ ಶಾ ಹೊಣೆ: ರಾಹುಲ್ ಗಾಂಧಿ ಆರೋಪ

Kannada News Now 1 week ago

ಗೃಹ ಸಚಿವ ಅಮಿತ್ ಶಾ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರಕ್ಕೆ ಗೃಹ ಸಚಿವರೇ ಕಾರಣ ಮತ್ತು ಸಂಸತ್ತಿನಲ್ಲಿ ಏನು ನಡೆದಿದೆ ಎಂಬುದನ್ನು ವಿವರಿಸುವ ಧೈರ್ಯ ಅವರಿಗೆ ಇಲ್ಲ ಎಂದು ಬುಧವಾರ ಆರೋಪಿಸಿದ್ದಾರೆ.

​ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಆಗಿನ ಶಿಕ್ಷಣ ಸಚಿವ ಧೇಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ತಿಂರೆ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ಗುಂಪಿನೊಂದಿಗೆ ರಾಹುಲ್ ಗಾಂಧಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
​ನಾನು ವಿವಿಧ ರಾಜ್ಯಗಳ ಯುವ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಸಂವಿಧಾನ, ಶಿಕ್ಷಣ ವ್ಯವಸ್ಥೆ ಹಾಗೂ ಭಾರತದ ಭವಿಷ್ಯಕ್ಕಾಗಿ ಹೋರಾಡಿದ ಅವರಂತಹ ಸಾವಿರಾರು ವಿದ್ಯಾರ್ಥಿಗಳ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್ ಹೇಳಿದರು.

​ತಮ್ಮ ಮೇಲೆ ಹೇಗೆ ಹಲ್ಲೆ ನಡೆಸಲಾಗಿದೆ ಮತ್ತು ಬೆದರಿಕೆ ಹಾಕಲಾಗಿದೆ ಎಂಬುದನ್ನು ಅವರು ನನಗೆ ವಿವರಿಸಿದ್ದಾರೆ. ಅವರು ಸಂವಿಧಾನವನ್ನು ರಕ್ಷಿಸಿದ್ದಾರೆ, ಭಾರತದ ಕಲ್ಪನೆಯನ್ನು ಮತ್ತು ಭಾರತದ ಭವಿಷ್ಯವನ್ನು ಕಾಪಾಡಿದ್ದಾರೆ ಎಂದು ರಾಹುಲ್ ತಿಳಿಸಿದರು.
​ದೋಷಪೂರಿತ, ಕುಸಿಯುತ್ತಿರುವ ಮತ್ತು ನಿರುಪಯುಕ್ತವಾಗಿರುವ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ದೂರುವುದು ಅಪರಾಧವಲ್ಲ ಎಂದು ಅವರು ಹೇಳಿದರು. ವ್ಯವಸ್ಥೆಯನ್ನು ಬದಲಾಯಿಸಬೇಕು, ಅದನ್ನು ಸರಿಪಡಿಸಬೇಕು ಮತ್ತು ವಿದ್ಯಾರ್ಥಿಗಳು ಕೇಳುತ್ತಿರುವುದು ಅದನ್ನೇ ಆಗಿದೆ. ಅವರು ಯಾವುದೇ ಹಿಂಸಾಚಾರದಲ್ಲಿ ತೊಡಗಿರಲಿಲ್ಲ, ಆಕ್ರಮಣಕಾರಿಯಾಗಿ ಅಥವಾ ಅನುಚಿತವಾಗಿ ವರ್ತಿಸಿರಲಿಲ್ಲ. ಆದರೂ ಅವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಲಾಗಿದೆ ಎಂದು ರಾಹುಲ್ ನುಡಿದರು.
​ಗೂಂಡಾಗಳನ್ನು ಕಳುಹಿಸಿ ಬಲವಂತವಾಗಿ ಕ್ಷಮೆ ಯಾಚಿಸುವುದು, 15 ವರ್ಷದ ಬಾಲಕನಿಂದ ಕ್ಷಮೆ ಪಡೆದು ಅದನ್ನು ಸ್ವೀಕರಿಸುವುದು ತುಕಡಾ ನೀತಿಯಾಗಿದ್ದು, ನಮಗೆ ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
​ಕಾರ್ಯನಿರ್ವಹಿಸುವ ಶಿಕ್ಷಣ ವ್ಯವಸ್ಥೆ ಇರಬೇಕು ಮತ್ತು ಪರೀಕ್ಷಾ ಸೋರಿಕೆಗಳು ನಿಲ್ಲಬೇಕು ಎಂದು ರಾಹುಲ್ ಅಭಿಪ್ರಾಯಪಟ್ಟರು.

​ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಈ ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿ ಗೃಹ ಸಚಿವರೇ ಎಂದು ಆರೋಪಿಸಿದರು. ಈ ಯುವತಿಯ ಮೇಲೆ ಪೆಲೆಟ್ ಗನ್ ಹಾರಿಸಲು ಕಾರಣರಾದವರು, ಕೆಲ ದಿನಗಳ ಹಿಂದೆ ನಾನು ಮಾಧ್ಯಮಗಳ ಮುಂದೆ ಕರೆತಂದಿದ್ದ ಯುವಕನ ಮೇಲೆ ಪೆಲೆಟ್ ಗನ್ ಹಾರಿಸಲು ಕಾರಣರಾದವರು ಮತ್ತು ಈ ಯುವತಿಯ ವಿರುದ್ಧ ಪೊಲೀಸ್ ಪಡೆಗಳನ್ನು ತಿರುಗಿಸಿದವರು ಭಾರತದ ಗೃಹ ಸಚಿವ ಅಮಿತ್ ಶಾ ಎಂದು ಕಿಡಿಕಾರಿದರು.
​ಮತ್ತೊಂದೆಡೆ, ರಾಹುಲ್ ಗಾಂಧಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರಾ, ಮಕ್ಕಳ ಮೂಲಕ ಸುಳ್ಳು ರಾಜಕೀಯ ನಿರೂಪಣೆಯನ್ನು ಸೃಷ್ಟಿಸುವುದು ಅನುಚಿತ ಎಂದು ಹೇಳಿದರು.

​ರಾಹುಲ್ ಗಾಂಧಿ ಅವರು ಸಮಸ್ಯೆಗಳನ್ನು ಎತ್ತುವುದರಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪಾತ್ರಾ, ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮಗಳಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪ್ರಸ್ತಾಪಿಸಿದರು.
​ದೇಶದ ಮಕ್ಕಳು ನಿರ್ಭೀತರಾಗಿರಬೇಕು ಮತ್ತು ಅಗತ್ಯವಿದ್ದಾಗಲೆಲ್ಲಾ ಚಳುವಳಿಗಳು ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸಲು ಹಿಂಜರಿಯಬಾರದು. ಜಾರ್ಖಂಡ್‌ನಲ್ಲಿ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ... ರಾಹುಲ್ ಗಾಂಧಿ ಅವರೊಂದಿಗೂ ಸಂವಾದ ನಡೆಸಿ ಅವರ ನೋವು ಹಾಗೂ ಸಂಕಷ್ಟಗಳನ್ನು ನಿವಾರಿಸಬೇಕು ಎಂದು ಪಾತ್ರಾ ಆಗ್ರಹಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Kannada News Now