Kannada News Now

1.8M Followers

Viral Video: ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ತಗೊಳ್ಳಿ, ಕುಮಾರಣ್ಣ ಮನ್ನಾ ಮಾಡುತ್ತಾರೆ- ಶಾಸಕಿ ಅನಿತಾ ಕುಮಾರಸ್ವಾಮಿ

24 Dec 2022.7:38 PM

ರಾಮನಗರ: ನೀವು ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ಸಾಲ ಪಡೆದು, ಮರು ಪಾವತಿಸಬೇಡಿ, ನನ್ನ ಪತಿ ಮಾಜಿ ಸಿಎಂ ಕುಮಾರಸ್ವಾಮಿ ( Farmer CM Kumaraswamy ) ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಸಾಲ ಮನ್ನಾ ಮಾಡುತ್ತಾರೆ ಎಂಬುದಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ( MLA Anitha Kumaraswamy ) ಹೇಳಿದ್ದಾರೆ.

ಭಾರತ್‌ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra

ಹೀಗೆ ಕಾರ್ಯಕ್ರಮವೊಂದರಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿರುವಂತ ವೀಡಿಯೋ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 21 ಸೆಕೆಂಡ್ ಇರೋ ವೀಡಿಯೋದಲ್ಲಿ ಸಾಲ ತಗೊಳ್ಳಿ, ಕುಮಾರಣ್ಣ ಮನ್ನಾ ಮಾಡುತ್ತಾರೆ ಎಂದಿದ್ದಾರೆ.

ಕಾರಡಗಿಯಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಆಸ್ಪತ್ರೆ ನಿರ್ಮಾಣ - ಸಿಎಂ ಬಸವರಾಜ ಬೊಮ್ಮಾಯಿ

ಅಂದಹಾಗೇ ಅನಿತಾ ಕುಮಾರಸ್ವಾಮಿ ವೈರಲ್ ಆಗಿರುವಂತ ವೀಡಿಯೋದಲ್ಲಿ, ನಿಮ್ಮ ಕುಮಾರಣ್ಣನವರು ಸ್ತ್ರೀ ಶಕ್ತಿ ಸಂಘದ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ತಗೊಳ್ಳಿ, ಎಷ್ಟೆಷ್ಟು ಬೇಕೋ ಸಾಲ ತಗೊಳ್ಳಿ. ಅಧಿಕಾರಕ್ಕೆ ಕುಮಾರಣ್ಣ ಬಂದಾಗ ಅವರೇ ಕ್ಲಿಯರ್ ಮಾಡುತ್ತಾರೆ ಏನೂ ತೊಂದರೆಯಿಲ್ಲ ಎಂಬುದಾಗಿ ಹೇಳಿದ್ದಾರೆ.


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags