Saturday, 01 Aug, 7.34 am Kannada News Now

ವಿಶ್ವ
ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ : ಸೋಂಕಿತರ ಸಂಖ್ಯೆ 1.77 ಕೋಟಿಗೆ ಏರಿಕೆ

ವಾಷಿಂಗ್ಟನ್ : ವಿಶ್ವದಾದ್ಯಂತ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 1,77,54,183 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ವಿಶ್ವದಾದ್ಯಂತ ಕಿಲ್ಲರ್ ಕೊರೊನಾಗೆ ಈವರೆಗೆ 1,11,58,285 ಮಂದಿ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದು, ಸೋಂಕಿತರ ಸಂಖ್ಯೆ 47,05,889 ಕ್ಕೆ ಏರಿಕೆಯಾಗಿದೆ. ಈವರೆಗೆ 1,56,747 ಮಂದಿ ಬಲಿಯಾಗಿದ್ದಾರೆ.

ಬ್ರೆಜಿಲ್ ನಲ್ಲಿ ಈವರೆಗೆ 26,66,298 ಸೋಂಕಿತರಿದ್ದು, 18,84,051 ಮಂದಿ ಗುಣಮುಖರಾಗಿದ್ದು, 92,568 ಮಂದಿ ಮೃತಪಟ್ಟಿದ್ದಾರೆ. 3 ನೇ ಸ್ಥಾನದಲ್ಲಿರುವ ಭಾರತದಲ್ಲಿ 1,697,054 ಮಂದಿ ಸೋಂಕಿತರಿದ್ದರೆ, ರಷ್ಯಾದಲ್ಲಿ 8,39,667 ಮಂದಿಗೆ ಸೋಂಕು ತಗುಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada News Now
Top