Kannada News
Kannada News@vasanthab

ಅಥಿತಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಅಥಿತಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
  • 915d
  • 159 shares

ಚಿಕ್ಕಮಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2020-21 ಶೈಕ್ಷಣಿಕ ಸಾಲಿನ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆಗಳಾದ ಉಪ್ಪಳ್ಳಿ, ತರೀಕೆರೆ, ಅಜ್ಜಂಪುರ, ಎನ್.ಆರ್.ಪುರ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಾದ ತೇಗೂರು ಹಾಗೂ ಕಡೂರು, ಚಿಕ್ಕಮಗಳೂರಿನಲ್ಲಿ ಖಾಲಿ ಇರುವ ಭೋಧಕ ಹುದ್ದೆಗೆ ನಿವೃತ್ತ /ಅತಿಥಿ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.

ಕನ್ನಡ ಭಾಷಾ ಶಿಕ್ಷಕರು ಒಂದು, ಇಂಗ್ಲಿಷ್ ಭಾಷಾ ಶಿಕ್ಷಕರು 02, ಉರ್ದು ಭಾಷಾ ಶಿಕ್ಷಕರು 01, ಗಣಿತ ಶಿಕ್ಷಕರು 02, ಹಿಂದಿ ಭಾಷಾ ಶಿಕ್ಷಕರು 02, ಸಮಾಜ ವಿಜ್ಞಾನ 01, ದೈಹಿಕ ಶಿಕ್ಷಕರು 01, ಪ್ರಥಮ ದರ್ಜೆ ಸಹಾಯಕರು 01 ಹುದ್ದೆಗಳಿದ್ದು, ಅರ್ಜಿಯನ್ನು ಸೆಪ್ಟೆಂಬರ್ 30 ರೊಳಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ.

No Internet connection

Link Copied