Sunday, 12 Jul, 7.45 am Kannada Suddhi

ರಾಷ್ಟ್ರೀಯ
ಅಮಿತಾಬ್ ಬಚ್ಚನ್ ಹಾಗೂ ಜೂನಿಯರ್ ಬಚ್ಚನ್‌ಗೆ ಕೊರೊನಾ ಪಾಸಿಟಿವ್:ಬಿಗ್ ಬಿ ಮನೆ ಸೀಲ್ ಡೌನ್..!

ದೇಶದಲ್ಲಿ ಕೊರೊನಾ ವೈರಸ್ ತನ್ನ ಆರ್ಭಟವನ್ನು ಮುಂದುವರಿಸಿದೆ. ಯಾರನ್ನೂ ಬಿಟ್ಟು ಬಿಡದೇ ಕಾಡುತ್ತಿರುವ ಕೊರೊನಾ ವೈರಸ್ ಸ್ಟಾರ್‌ಗಳಿಗೂ ವಕ್ಕರಿಸುತ್ತಿದೆ. ಬಾಲಿವುಡ್‌ನ ಮೇಲೂ ಕೊರೊನಾ ತನ್ನ ಕರಿನೆರಳನ್ನು ಬೀರಿದ್ದು, ಇದೀಗ ನಟ ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್‌ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಇಬ್ಬರೂ ಕೂಡ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅಮಿತಾಬ್ ಅವರ ನಿವಾಸವನ್ನು ಸೀಲ್ ಡೌನ್ ಮಾಡಿ, ಆ ಪ್ರದೇಶವನ್ನು ಕಂಟೇನ್ಮೆAಟ್ ಪ್ರದೇಶ ಎಂದು ಮುಂಬೈ ಮಹಾನಗರ ಪಾಲಿಕೆ ಬ್ಯಾನರ್ ಅಳವಡಿಸಿದೆ.
ಈಗಾಗಲೇ ಪಾಲಿಕೆ ಅಧಿಕಾರಿಗಳು ಮತ್ತು ಆರೋಗ್ಯಕರ್ತರು ಆಗಮಿಸಿ ಮನೆಯ ಸುತ್ತ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಿ, ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಬಿಗ್‌ಬಿ ಪತ್ನಿ ಜಯಾ ಬಚ್ಚನ್ ಹಾಗೂ ಅಭಿಷೇಕ್ ಪತ್ನಿ ಐಶ್ವರ್ಯ ರೈ ಬಚ್ಚನ್, ಪುತ್ರಿ ಆರಾಧ್ಯಾ ಅವರಿಗೆ ಕೊರೊನಾ ನೆಗೆಟಿವ್ ಇರುವುದು ದೃಢಪಟ್ಟಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Suddhi
Top