Sunday, 02 Aug, 12.27 pm Kannada Suddhi

ರಾಷ್ಟ್ರೀಯ
ಅಮಿತಾಬ್ ಬಚ್ಚನ್ ಕೊರೊನಾ ವರದಿ ನೆಗೆಟಿವ್: ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ:ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಇದೀಗ ಸೋಂಕಿನಿAದ ಗುಣಮುಖರಾಗಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ವಿಷಯವನ್ನು ಬಿಗ್ ಬಿ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊAಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅಭಿಷೇಕ್ "ನನ್ನ ತಂದೆಯವರಿಗೆ ಕೋವಿಡ್ -೧೯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಈಗ ಮನೆಯಲ್ಲಿದ್ದಾರೆ ಮತ್ತು ವಿಶ್ರಾಂತಿ ಪಡೆಯುತ್ತಾರೆ. ನಿಮ್ಮ ಎಲ್ಲಾ ಪ್ರಾರ್ಥನೆಗಳಿಗಾಗಿ ಮತ್ತು ನೀವು ಅವರಿಗೆ ಶುಭಾಶಯ ತಿಳಿಸಿರುವುದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ನಟ ಅಭಿಷೇಕ್ "ದುರದೃಷ್ಟವಶಾತ್ ನನಗೆ ಮತ್ತೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದೀಗ ಆಸ್ಪತ್ರೆಯಲ್ಲಿಯೇ ಇದ್ದೇನೆ. ನಾನು ಇದನ್ನು ಸೋಲಿಸಿ ಆರೋಗ್ಯಕರವಾಗಿ ಹಿಂತಿರುಗುತ್ತೇನೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Suddhi
Top