Sunday, 02 Aug, 1.40 am Kannada Suddhi


ಅನ್ ಲಾಕ್ ೩.೦ಜಾರಿ:ರಾಜ್ಯದಲ್ಲಿ ಇಂದಿನಿAದ ರಾತ್ರಿ ಕರ್ಫ್ಯೂ, ಸಂಡೇ ಲಾಕ್‌ಡೌನ್ ಇಲ್ಲ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್‌ನ ಹಾವಳಿ ಮುಂದುವರಿದಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಲಾಕ್ ಡೌನ್ ನಡುವೆಯೂ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬುತ್ತಿದೆ. ಇದೀಗ ಅನ್ ಲಾಕ್ ೩.೦ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಆಗಸ್ಟ್ ೧ರಿಂದ ಮೂರನೇ ಹಂತದ ಅನ್‌ಲಾಕ್ ಜಾರಿಯಾಗಲಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಈ ಹಿಂದೆ ಇದ್ದ ಸಂಡೇ ಲಾಕ್ ಡೌನ್ ರಾತ್ರಿ ಕರ್ಫ್ಯೂವನ್ನು ಕೂಡ ರದ್ದು ಮಾಡಲಾಗಿದೆ.
ಜುಲೈ ೫ರಂದು ಅಸ್ಥಿತ್ವಕ್ಕೆ ಬಂದಿರುವ ವೀಕೆಂಡ್ ಲಾಕ್ ಡೌನ್ ಯಶಸ್ವಿಯಾಗಿ ನಡೆಯುತ್ತಿತ್ತು. ಇದೀಗ ಅನ್ ಲಾಕ್ ೩.೦ಜಾರಿ ಹಿನ್ನೆಲೆ ಆಗಸ್ಟ್ ೨ರ ರವಿವಾರದ ಲಾಕ್‌ಡೌನ್ ಕೂಡ ರದ್ದಾಗಿದ್ದು, ಕಂಟೈನ್‌ಮೆAಟ್ ವಲಯದಲ್ಲಿ ಲಾಕ್‌ಡೌನ್ ಆಗಸ್ಟ್ ೩೧ರವರೆಗೆ ಮುಂದುವರಿಯಲಿದೆ.
ಆಗಸ್ಟ್ ೨ ರ ಭಾನುವಾರವಾದ ಇಂದಿನಿAದ ಲಾಕ್ ಡೌನ್ ತೆರವುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಸಂಡೇ ಲಾಕ್ ಡೌನ್ ತೆರವುಗೊಳಿಸಲಾಗಿದ್ದು, ರಾಜ್ಯದಲ್ಲಿ ಎಂದಿನAತೆ ವ್ಯಾಪಾರ ವಹಿವಾಟು, ಜನ ಸಂಚಾರ, ವಾಹನ ಸಂಚಾರ ಇರಲಿದೆ.
ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಆನ್ ಲಾಕ್ ೩.೦ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಟವಾದ ಬಳಿಕ ರಾಜ್ಯ ಸರ್ಕಾರ ಭಾನುವಾರದ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಆದೇಶ ಹೊರಡಿಸಿದೆ.
ಅನ್ ಲಾಕ್ ೩.೦ಹೊರಡಿಸಿರುವ ರಾಜ್ಯ ಸರ್ಕಾರ ಕೊರೊನಾ ಕುರಿತ ಎಲ್ಲಾ ಎಚ್ಚರಿಕೆಯನ್ನು ವಹಿಸಬೇಕು. ಸಾರ್ವಜನಿಕರು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು ಎಂದು ಜನರಲ್ಲಿ ಮನವಿ ಮಾಡಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Suddhi
Top