Thursday, 16 Jul, 12.50 pm Kannada Suddhi

ರಾಷ್ಟ್ರೀಯ
ಕೊರೊನಾ ಸೋಂಕಿತನಿಗೆ ೮೦ದಿನಗಳವರೆಗೆ ಚಿಕಿತ್ಸೆ ನೀಡಿ, ೧.೫೨ ಕೋಟಿ ಬಿಲ್ ಮನ್ನಾ ಮಾಡಿದ ದುಬೈ ಆಸ್ಪತ್ರೆ!

ಹೈದರಾಬಾದ್:ದೇಶದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಕೊರೊನಾ ಚಿಕಿತ್ಸೆಗೆ ಸಂಬAಧಿಸಿದAತೆ ಕೆಲವೊಂದು ಆಸ್ಪತ್ರೆಗಳು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಹಣವಿದ್ದರೆ ಎಲ್ಲಾ ಇಲ್ಲವಾದರೆ ಏನಿಲ್ಲ ಎನ್ನುವ ಈಗಿನ ಕಾಲದಲ್ಲಿ ಇಲ್ಲೊಂದು ಆಸ್ಪತ್ರೆ ಮಾನವೀಯತೆಯನ್ನು ಮೆರೆದು ವಿಶ್ವಕ್ಕೆ ಮಾದರಿಯಾಗಿದೆ. ಹೌದು, ದುಬೈನಲ್ಲಿರುವ ಆಸ್ಪತ್ರೆಯೊಂದು ತೆಲಂಗಾಣದ ೪೨ ವರ್ಷದ ವ್ಯಕ್ತಿಯ ೧.೫೨ ಕೋಟಿ ರೂ. ಬಿಲ್ ಮನ್ನಾ ಮಾಡಿದೆ. ಎರಡು ವರ್ಷಗಳ ಹಿಂದೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ವ್ಯಕ್ತಿ ದುಬೈಗೆ ಹೋಗಿದ್ದ ವ್ಯಕ್ತಿಯೋರ್ವರು ಏಪ್ರಿಲ್ ೨೩ರಂದು ದುಬೈ ಆಸ್ಪತ್ರೆಗೆ ಜ್ವರ ಮತ್ತು ಕೆಮ್ಮಿನ ಕಾರಣಕ್ಕೆ ದಾಖಲಾಗಿದ್ದರು. ಬಳಿಕ ಅವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ದೃಢಪಟ್ಟಿತ್ತು. ಒಟ್ಟು ೮೦ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದ ಈ ವ್ಯಕ್ತಿ ಇದೀಗ ಸೋಂಕಿನಿAದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಒಟ್ಟು ೮೦ ದಿನಗಳ ಕಾಲ ಚಿಕಿತ್ಸೆ ಪಡೆದ ವ್ಯಕ್ತಿಗೆ ಆಸ್ಪತ್ರೆ ೧.೫೨ ಕೋಟಿ ಬಿಲ್ ಅನ್ನು ನೀಡಿತ್ತು. ಆದರೆ, ವ್ಯಕ್ತಿಯ ಬಳಿ ನೀಡಲು ಹಣ ಇರಲಿಲ್ಲ. ದುಬೈನಲ್ಲಿರುವ ತೆಲಗು ಉದ್ಯಮಿ ಗುಂಡೇಲಿ ನರಸಿಂಹ ವ್ಯಕ್ತಿಯ ಸಹಾಯಕ್ಕೆ ಬಂದರು. ಅವರು ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಪಡೆದು, ಮಾನವೀಯತೆ ಆಧಾರದ ಮೇಲೆ ಬಿಲ್ ಮನ್ನಾ ಮಾಡುವಂತೆ ಆಸ್ಪತ್ರೆಗೆ ಪತ್ರವನ್ನು ಬರೆದರು. ಬಳಿಕ ಆಸ್ಪತ್ರೆಯ ಬಿಲ್ ಅನ್ನು ಮನ್ನಾ ಮಾಡಿದೆ.
ಹಾಗೆಯೇ, ದುಬೈನಲ್ಲಿರುವ ಉದ್ಯಮಿ ಅಶೋಕ್ ವ್ಯಕ್ತಿ ತೆಲಂಗಾಣಕ್ಕೆ ವಾಪಸ್ ಹೋಗಲು ಟಿಕೆಟ್ ವ್ಯವಸ್ಥೆ ಮಾಡಿದರು. ಹೈದರಾಬಾದ್‌ನವರಾದ ಅವರು ಬುಧವಾರ ತವರಿಗೆ ವಾಪಸ್ ಆಗಿದ್ದಾರೆ. ವ್ಯಕ್ತಿಯ ಪತ್ನಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಗೆ ಕುಟುಂಬ ಸದಸ್ಯರು ಮತ್ತು ತೆಲಂಗಾಣ ರಾಜ್ಯದ ಎನ್‌ಆರ್‌ಐ ವಿಭಾಗದ ಅಧಿಕಾರಿಗಳು ಸ್ವಾಗತ ಕೋರಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Suddhi
Top