Sunday, 22 Nov, 7.04 am ಕನ್ನಡ ವಾರ್ತೆ

Posts
ಡೀಸೆಲ್, ಪೆಟ್ರೋಲ್ ಬೆಲೆ‌ ಎರಡನೇ ದಿನವೂ ಹೆಚ್ಚಳ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಶನಿವಾರ ಲೀಟರ್‌ಗೆ 15 ಪೈಸೆಯಷ್ಟು ಹೆಚ್ಚಿಸಲಾಗಿದೆ. ಡೀಸೆಲ್ ಬೆಲೆಯಲ್ಲಿ 20 ಪೈಸೆ ಹೆಚ್ಚಳ ಆಗಿದೆ. ಶುಕ್ರವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿಸಲಾಗಿತ್ತು.

ಬೆಂಗಳೂರಿನಲ್ಲಿ ಶನಿವಾರ ಡೀಸೆಲ್‌ ಪ್ರತಿ ಲೀಟರ್‌ಗೆ ₹ 75.14ರಂತೆ ಮಾರಾಟವಾಗಿದೆ. ಶುಕ್ರವಾರದ ಬೆಲೆಗೆ ಹೋಲಿಸಿ
ದರೆ 23 ಪೈಸೆಯಷ್ಟು ಹೆಚ್ಚಳವಾದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ ಬೆಲೆಯಲ್ಲಿ 18 ಪೈಸೆಯಷ್ಟು ಹೆಚ್ಚಳ ಆಗಿದ್ದು,
₹ 84.10ರಂತೆ ಮಾರಾಟವಾಗಿದೆ.

ಸರಿಸುಮಾರು ಎರಡು ತಿಂಗಳ ಕಾಲ ತೈಲ ಬೆಲೆಯಲ್ಲಿ ಬದಲಾವಣೆ ಆಗಿರಲಿಲ್ಲ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆದ ಏರಿಕೆಯ ಕಾರಣದಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: kannada vaarte
Top