Posts
ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರಲಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಪ್ರಕಟಿಸಿರುವ ಅನ್ಲಾಕ್ 6 ಮಾರ್ಗಸೂಚಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರಲಿದೆ.
ಜೂನ್ 1ರಿಂದ ದೇಶದಲ್ಲಿ 'ಅನ್ ಲಾಕ್' ಪ್ರಕ್ರಿಯೆ ಆರಂಭವಾದಾಗಿನಿಂದ ರೆಸ್ಟೋರೆಂಟ್, ಸಿನಿಮಾ ಮಂದಿರ, ಜಿಮ್, ಮಾಲ್ ಗಳು, ಶಾಲೆಗಳು, ಈಜುಕೊಳಗಳು, ಧಾರ್ಮಿಕ ಸ್ಥಳಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಕಡ್ಡಾಯವಾಗಿ ಎಸ್ ಒಪಿ ಗಳ ವ್ಯವಸ್ಥೆಯ ಅಡಿಯಲ್ಲಿ ತರಲಾಗಿದೆ.
ಯಾವ್ಯಾವುದಕ್ಕೆ ನಿರ್ಬಂಧಿತ ಅನುಮತಿ?: ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ- ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳ ಬಳಕೆ- ಶೇ.50ರಷ್ಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು, ಸಿನಿಮಾ ಹಾಲ್ಗಳಿಗೆ ಅನುಮತಿ- ಸಾಮಾಜಿಕ, ಧಾರ್ವಿುಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆಗಳನ್ನು ನಡೆಸಬಹುದು.
ಸಭಾಂಗಣದ ಸಾಮರ್ಥ್ಯದ ಶೇ.50ರಷ್ಟು ಜನರು ಭಾಗವಹಿಸಬಹುದು. ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಮಾತ್ರ ಅನುಮತಿ.- ಜನರು ಮತ್ತು ಸರಕುಗಳ ಅಂತರ್-ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಪ್ರತ್ಯೇಕ ಅನುಮೋದನೆ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ.
ರಾಜಕೀಯ ಸಭೆಗಳು ಕೇವಲ ನಿಯಂತ್ರಣ ವಲಯಗಳ ಹೊರಗೆ ಮಾತ್ರ ನಡೆಯಬಹುದು. ಈ ಅವಧಿಯಲ್ಲಿ ನಿಯಂತ್ರಣ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುವ ಂತಹ ಲಾಕ್ ಡೌನ್ ಅನ್ನು ಮುಂದುವರಿಸಲಾಗುವುದು.50 ರಷ್ಟು ಆಸನ ಸಾಮರ್ಥ್ಯವಿರುವ ಚಿತ್ರಮಂದಿರಗಳು, ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗಳು, ಬಿಸಿನೆಸ್ ಟು ಬಿಸಿನೆಸ್ (ಬಿ2ಬಿ) ಪ್ರದರ್ಶನಗಳು, ಕ್ರೀಡಾಪಟುಗಳ ತರಬೇತಿಗೆ ಬಳಸುವ ಈಜುಕೊಳಗಳು, ಮನರಂಜನಾ ಪಾರ್ಕ್ ಗಳು ಮತ್ತು ಇತರ ಸ್ಥಳಗಳಲ್ಲಿ ಅನುಮತಿ