Wednesday, 16 Sep, 4.24 pm Kannada Viral News

Posts
"ಕೊರೊನಾ ವೈರಸ್ ಚೀನಾ ಸೃಷ್ಟಿ "ವೈರಾಲಜಿಸ್ಟ್ ಆರೋಪ

ನ್ಯೂಯಾರ್ಕ್: ಕೊರೊನಾ ವೈರಸ್ ಉಗಮದ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ದೇಶ ತೊರೆಯುವಂತೆ ಒತ್ತಾಯಿಸಲ್ಪಟ್ಟ ಚೀನಾದ ವಿಸ್ಲೊಬ್ಲೋವರ್ ವೈರಾಲಜಿಸ್ಟ್ ಲಿ-ಮೆಂಗ್ ಯಾನ್, ಕೋವಿಡ್ -19 ವೈರಸ್ ಚೀನಾದ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಈ ಹಿಂದೆಯೂ ಕೂಡ ಇಂತದ್ದೇ ಆರೋಪಗಳನ್ನು ಮಾಡಿದ್ದರು. ಆದರೆ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಇವರ ಆರೋಪಗಳನ್ನು ನಿರಾಕರಿಸಿದ್ದವು.

ಯುಎಸ್ ಮೂಲದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಚೀನಾದ ಮಿಲಿಟರಿ ಒಡೆತನದ ಲ್ಯಾಬ್​ನಲ್ಲಿ ಕೋವಿಡ್-19 ವೈರಸ್ ಅಭಿವೃದ್ಧಿಪಡಿಸಲಾಗಿದೆ. ಜೌಶನ್ ಬ್ಯಾಟ್ ಕೊರೊನಾ ವೈರಸ್ ZC45 ಮತ್ತು ZXC21 ಕುರಿತ ನನ್ನ ವೈಜ್ಞಾನಿಕ ವರದಿ ಶೀಘ್ರದಲ್ಲೇ ಹೊರ ಬರಲಿದೆ ಎಂದಿದ್ದಾರೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಿಯಂತ್ರಿಸುವ ಚೀನಾದ ಮಿಲಿಟರಿ ಸೌಲಭ್ಯದಲ್ಲಿ ಕೊರೊನಾ ವೈರಸ್ ಅಭಿವೃದ್ಧಿಪಡಿಸಲಾಗಿದೆ ಎಂದು ಈ ಹಿಂದೆ ತೈವಾನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಜುಲೈನಲ್ಲಿ ಸ್ಪ್ಯಾನಿಷ್ ದಿನಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ, ವುಹಾನ್‌ನಲ್ಲಿನ ಮಾಂಸ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಹುಟ್ಟಿಕೊಂಡಿಲ್ಲ ಎಂಬುದನ್ನು ನಿರೂಪಿಸಲು ದೃಢವಾದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Viral News
Top