Thursday, 26 Nov, 5.53 am Kannadanet

ನ್ಯೂಸ್
ರಸ್ತೆ ಬದಿ ಟೀ ಅಂಗಡಿಗೆ ನುಗ್ಗಿದ ಲಾರಿ : ಇಬ್ಬರ ಸಾವು

ಚಿಕ್ಕಬಳ್ಳಾಪುರ :

ರಸ್ತೆ ಬದಿಯ ಟೀ ಅಂಗಡಿ ಗೆ ಲಾರಿ ನುಗ್ಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 7 ರ ಚಿಕ್ಕಬಳ್ಳಾಪುರ ತಾಲ್ಲೂಕಿನ ಚದುಲಪುರ ಗೇಟ್ ಬಳಿ ಘಟನೆ ನಡೆದಿದೆ.ಕೃಷ್ಣ ಕಾಂಡಿಮೆಂಟ್ಸ್ ಮುಂದೆ ಟೀ ಕುಡಿಯುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪಿದ್ದಾರೆ.ವಕೀಲ ಯಾಮಣ್ಣಾ ಚಾರಿ(45) ಹಾಗೂ ಮತ್ತೋರ್ವ ಸಾವಿಗೀಡಾದ ದುರ್ದೈವಿಗಳು ಸಾವು. ಬೆಂಗಳೂರಿನಿಂದ ಅತಿವೇಗದಲ್ಲಿ ಬರುತ್ತಿದ್ದ ಲಾರಿ ಹಂಪ್ ನಿಂದ ಹಾರಿ ಕಾಂಡಿಮೆಂಟ್ಸ್ ಅಂಗಡಿಗೆ ನುಗ್ಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅಂಗಡಿ ಹಾಗೂ ಲಾರಿ ಸಂಪೂರ್ಣ ಹಾನಿಗೊ ಳಗಾಗಿವೆ. ಸ್ಥಳಕ್ಕೆ ನಂದಿಗಿರಿಧಾಮ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannadanet
Top