Dailyhunt
1-10 ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಇನ್ಮುಂದೆ ಸರ್ಕಾರಿ-ಅನುದಾನಿತ  ಶಾಲೆಗಳಲ್ಲಿ ಸಿಗಲಿದೆ  ಮೊಟ್ಟೆ/ಚಿಕ್ಕಿ/ಬಾಳೆಹಣ್ಣು

1-10 ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಇನ್ಮುಂದೆ ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ಸಿಗಲಿದೆ ಮೊಟ್ಟೆ/ಚಿಕ್ಕಿ/ಬಾಳೆಹಣ್ಣು

Kannada News Now 2 years ago

*ಅವಿನಾಶ್‌ ಆರ್ ಭೀಮಸಂದ್ರಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಸತತ 14 ನೇ ಬಾರಿ ಇಂದು ರಾಜ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್‌ ಆರಂಭದ ವೇಳೇ ಮಾತನಾಡಿದ ಅವರು ಬಸವಣ್ಣನವರಿಂದ ಹಿಡಿದು ಒಡೆಯರ ತನಕ ಈ ನಾಡಿನ ಘನ ತೇರನ್ನು ಇಂದಿಗೂ ನಾವೆಲ್ಲ ಎಳೆಯುತ್ತಿದ್ದೇವೆ ಅಂತ ಹೇಳಿದರು.

ಸರ್ವರಿಗೂ ಸಮಪಾಲನ್ನು ನಾವು ಅನುಸರಿಸುತ್ತಿದ್ದೇವೆ ಆಂತ ಅವರು ಹೇಳಿದರು. ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ಕುವೆಂಪು ಅವರ ಮಾತನ್ನು ಉಲ್ಲೇಖ ಮಾಡಿದರು.

ಬಜೆಟ್‌ ಆರಂಭದ ವೇಳೇ ಮಾತನಾಡಿದ ಅವರು ಬಸವಣ್ಣನವರಿಂದ ಹಿಡಿದು ಒಡೆಯರ ತನಕ ಈ ನಾಡಿನ ಘನ ತೇರನ್ನು ಇಂದಿಗೂ ನಾವೆಲ್ಲ ಎಳೆಯುತ್ತಿದ್ದೇವೆ ಅಂತ ಹೇಳಿದರು. ಸರ್ವರಿಗೂ ಸಮಪಾಲನ್ನು ನಾವು ಅನುಸರಿಸುತ್ತಿದ್ದೇವೆ ಆಂತ ಅವರು ಹೇಳಿದರು. ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ಕುವೆಂಪು ಅವರ ಮಾತನ್ನು ಉಲ್ಲೇಖ ಮಾಡಿದರು.

ರೈತರ ಏಳಿಗೆ, ಅಭಿವೃದ್ದಿ, ಸಾಮಾಜಿಕ ಕಾಳಜಿ ನಮಗೆ ಇದೇ ಅಂತ ಅವರು ತಿಳಿಸಿದರು., 3. ಲ 27 ಸಾವಿರ ಕೋಟಿ ಬಜೆಟ್‌ ಅನ್ನು ಮಂಡನೆ ಮಾಡಲಿದ್ದೇವೆ ಅಂತ ಅವರು ತಿಳಿಸಿದರು. ಬೆಳಕು ಇಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸುಗಳೇ ಇಲ್ಲದ ದಾರಿಯಲ್ಲಿ ಹೇಗೆ ನಡೆಯಲು ಸಾಧ್ಯ ಎನ್ನವು ಗಿರೀಶ ಕಾರ್ನಾಡ. ಅವರ ಮಾತನ್ನು ಉದೇ ವೇಳೇ ಅವರು ಉಲ್ಲೇಖ ಮಾಡಿದರು.

ಇದೇ ವೇಳೆ ಈ ಬಾರಿಯ ಬಜೆಟ್‌ನಲ್ಲಿ ಅಬಕಾರಿ ಶುಲ್ಕದಲ್ಲಿ ಹೆಚ್ಚಳವನ್ನು ಮಾಡಿದ್ದು ಶೇಕಡ 20ರಷ್ಟು ಮಾಡಿದ್ದು ಈ ಮೂಲಕ ಬಿಯರ್‌ ಮೇಲಿನ ಅಬಕಾರಿ ಶುಲ್ಕವನ್ನು ಶೇ 10ರಷ್ಟುಹೆಚ್ಚಳ ಮಾಡಲಾಗಿದೆ. ಇದೇ ವೇಳೆ ಬಜೆಟ್‌ನಲ್ಲಿ ಹಸು, ಎತ್ತು, ಎಮ್ಮೆ ಮೃತಪಟ್ಟರೆ 10 ಸಾವಿರ ಪರಿಹಾರ ಬಜೆಟ್‌ನಲ್ಲಿ ಘೋಷಣೆಮಾಡಲಾಗಿದ್ದು, ಈ ಮೂಲಕ ಅನುಗ್ರಹ ಯೋಜನೆ ಜಾರಿ ಮಾಡಲಾಗಿದೆ. ನಮ್ಮ ಮೆಟ್ರೋಗೆ 30,000 ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದೇ ವೇಳೆ ಅವರು ಪಂಚ ಗ್ಯಾರಂಟಿಗಳಿಗೆ 52,000 ಕೋಟಿ ಹಣ, ಬೇಕಾಗಿದೆ ಅಂತ ಮಾಹಿತಿ ನೀಡಿದರು. ಇನ್ನೂ ಇಂದಿರಾ ಕ್ಯಾಂಟಿನ್‌ಗೆ 100 ಕೋಟಿ ಬೇಕಾಗಿದೆ ಅಂತ ಮಾಹಿತಿ ನೀಡಿದರು. ಇದೇ ವೇಳೇ ಸಿಎಂ ಬ್ರಾಂಡ್‌ ಬೆಂಗಳೂರಿಗೆ ಬಜೆಟ್‌ನಲ್ಲಿ ಅತಿ ಹೆಚ್ಚು ಹಣವನ್ನು ನೀಡಿದ್ದು, ಬರೋಬ್ಬರಿ 45000ಕೋಟಿ ಹಣ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದು ಮೆಟ್ರೋ, ಬೆಂಗಳೂರು ಉಪನಗರ ರೈಲಿಗೆ ಸೇರಿದಂಥೆ ಹಲವು ಅಭಿವೃದ್ದಿ ಕೆಲಸಗಳಿಗೆ ಮೀಸಲು ಇಡಲಾಗಿದೆ. ಇದೇ ವೇಳೆ ಆಸ್ತಿ ನೋಂದಣಿ, ಮುಂದ್ರಾಂಕ ಸುಂಕವನ್ನು ಕೂಡ ಹೆಚ್ಚಳ ಮಾಡಲಾಗಿದೆ. ರೇಶ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು 5 ಲಕ್ಷದ ತನಕ ಬಡ್ಡಿ ದರದಲ್ಲಿ ಸಿಗಲಿದೆ ಸಾಲ ನೀಡಲಾಗುವುದು.

ಇದೇ ವೇಳೇ ಅವರು ಕೇಂದ್ರ ಸರ್ಕಾರದ APMC ಕಾಯ್ದೆ ವಾಪಸ್ಸು ಪಡೆದುಕೊಳ್ಳಲಾಗುವುದು ಅಂತ ತಿಳಿಸಿದರು. ಇದು ರೈತರಿಗೆ ನೆರವಾಗಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆ ರೈತರಿಗೆ ಮೋಸ ಮಾಡಲಿದೆ ಅಂತ ತಿಳಿಸಿದರು. ವಾರದಲ್ಲಿ ಎರಡು ದಿನ ಮೊಟ್ಟೆ, ಇಲ್ಲವೇ ಚಿಕ್ಕಿ, ಇಲ್ಲವೇ ಬಾಳೆ ಹಣ್ಣು ಅನ್ನು ಸರ್ಕಾರಿ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುವುದು ಅಂತ ಇದೇ ವೇಳೆ ಸಿಎಂ ತಿಳಿಸಿದರು. ಇದರ ಲಾಭವನ್ನು 60 ಲ ಮಂದಿ ಮಕ್ಕಳು ಪಡೆದುಕೊಳ್ಳಲಿದ್ದಾರೆ ಅಂತ ಅವರು ತಿಳಿಸಿದರು.

ಈ ಬಾರಿ ಸೇರಿದಂತೆ ಒಟ್ಟು ಹದಿನಾಲ್ಕನೇ ಬಾರಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ಮಾಡುತ್ತಿರುವುದು ಆರ್ಥಿಕ ಮಂಡನೆಯಲ್ಲಿ ಇತಿಹಾಸಕ್ಕೆ ಕಾರಣವಾಗಿದೆ. ಇದರೊಂದಿಗೆ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ.


Dailyhunt
Disclaimer: This content has not been generated, created or edited by Dailyhunt. Publisher: Kannada News Now