Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ರಾಜ್ಯಾಧ್ಯಂತ 'ಪಠ್ಯಪುಸ್ತಕ ಪರಿಷ್ಕರಣೆ' ವಿವಾದವಾದ್ರೇ, ಈ 'ಶಾಲೆ'ಯ ಹೆಸರೇ ವಿವಾದ.!

BIG NEWS: ರಾಜ್ಯಾಧ್ಯಂತ 'ಪಠ್ಯಪುಸ್ತಕ ಪರಿಷ್ಕರಣೆ' ವಿವಾದವಾದ್ರೇ, ಈ 'ಶಾಲೆ'ಯ ಹೆಸರೇ ವಿವಾದ.!

Kannada News Now 4 years ago

ಚಾಮರಾಜನಗರ: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಎದ್ದಿದ್ದರೇ.. ಈ ಶಾಲೆಯಲ್ಲಿ ಮಾತ್ರ ಹೆಸರೇ ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಜೊತೆಗೆ ಶಾಲೆಗೆ ಇಟ್ಟಿರುವಂತ ಗ್ರಾಮದ ಹೆಸರನ್ನು ಬದಲಾವಣೆ ಮಾಡೋವರೆಗೆ ಮಕ್ಕಳನ್ನು ದಾಖಲು ಮಾಡೋದಿಲ್ಲ ಎಂಬುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಹೀಗಾಗಿ ಮೈಸೂರಪ್ಪನ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಸರೇ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

BREAKING NEWS: 'ಕ್ಲಮ್ಯಾಕ್ಸ್' ಹಂತ ತಲುಪಿದ 'ಪಠ್ಯಪುಸ್ತಕ ಪರಿಷ್ಕರಣೆ' ವಿವಾದ: ಇಂದು ಸಂಜೆ 'ಶಿಕ್ಷಣ ಸಚಿವ'ರಿಂದ 'ಸಿಎಂ ಬೊಮ್ಮಾಯಿ'ಗೆ ವರದಿ ಸಲ್ಲಿಕೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಟ್ಟಿದ್ದಂತ ಗ್ರಾಮದ ಹೆಸರೇ ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆ ಪಿಜಿ ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದಂತ ಶಾಲೆಗೆ ದಾಖಲಾತಿ ಇಲ್ಲದೇ ಮುಚ್ಚಲಾಗಿತ್ತು. ಕೊನೆಗೆ ಹೊಸದೊಡ್ಡಿ ಗ್ರಾಮಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಶಾಲೆಯನ್ನು ಹೊಸದೊಡ್ಡಿಗೆ ವರ್ಗಾವಣೆ ಮಾಡಿದ್ರು, ಹೆಸರು ಮಾತ್ರ ಮೈಸೂರಪ್ಪನ ದೊಡ್ಡಿ ಎಂಬುದಾಗೇ ನಾಮಫಲಕದಲ್ಲಿ ಇತ್ತು. ಈ ಹೆಸರನ್ನು ಬದಲಾವಣೆ ಮಾಡಬೇಕು. ಅಲ್ಲಿವಯವರೆಗೆ ಶಾಲೆಗೆ ಮಕ್ಕಳನ್ನು ದಾಖಲಿಸೋದಿಲ್ಲ ಎಂಬುದಾಗಿ ಮಕ್ಕಳ ಪೋಷಕರು ಹಠ ಹಿಡಿದು, ಬಹಿಷ್ಕರಿಸಿದ್ದರು.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನಗ ಮೇಲೆ ಹಲ್ಲೆ: ಪೊಲೀಸ್ ಪೇದೆ ಸಸ್ಪೆಂಡ್.!

ಈ ವಿಚಾರವಾಗಿ ಬಿಇಒ ಟಿ ಆರ್ ಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ, ದಿಢೀರ್ ಹೆಸರು ಬದಲಾವಣೆ ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ಬದಲಾವಣೆ ಆಗಬೇಕಿದೆ. ಆ ಬಗ್ಗೆ ವರದಿಯನ್ನು ಕಳಿಸೋದಾಗಿ ಪೋಷಕರನ್ನು ಮನವೊಲಿಸಿದ್ದಾರೆ. ಅಂತಿಮವಾಗಿ ಮೈಸೂರಪ್ಪನ ದೊಡ್ಡಿಯನ್ನು ಹೊಸದೊಡ್ಡಿ ಎಂಬುದಾಗಿ ಬದಲಿಸೋ ಭರವಸೆ ನೀಡಿದ ಕಾರಣ, ಬಹಿಷ್ಕಾರದಿಂದ ಗ್ರಾಮಸ್ಥರು ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದಿಂದ 'ರಸ್ತೆ ಸುರಕ್ಷತಾ ಪ್ರಾಧಿಕಾರ'ದ ಸಮಗ್ರ 'ಕ್ರಿಯಾ ಯೋಜನೆ'ಗೆ '300 ಕೋಟಿ ಅನುದಾನ' ಬಿಡುಗಡೆ


Dailyhunt
Disclaimer: This content has not been generated, created or edited by Dailyhunt. Publisher: Kannada News Now