Dailyhunt
BIGG NEWS : ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

BIGG NEWS : ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

Kannada News Now 3 years ago

ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕ ಅಥವಾ ವಿಭಾಗದ ಹೊರಗಿನ ಪರಸ್ಪರ ವರ್ಗಾವಣೆಗೆ ಸೇವಾವಧಿ ಪ್ರಕರಣದಲ್ಲಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರುವವರನ್ನು ಮಾತ್ರ ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಪರಸ್ಪರ ವರ್ಗಾವಣೆ: ಜೇತಾ ಘಟಕ ವಿಭಾಗದ ಹೂರಗೆ ಪರಸ್ಪರ ವರ್ಗಾವಣೆಗೆ ಒಟ್ಟು ಸೇವಾವಧಿಯಲ್ಲಿ ಆ ವೃಂದದಲ್ಲಿ ಕನಿಷ್ಟ 5 ವರ್ಷಗಳ ಸೇವೆ ಪೂರ್ಣಗೊಂಡಿರಬೇಕು ಹಾಗೂ ಕರ್ತವ್ಯನಿರತ ಸ್ಥಳದಲ್ಲಿ ಕನಿಷ್ಕ 3 ವರ್ಷಗಳ ಸೇವೆ ಪೂರ್ಣಗೊಂಡಿರುವ ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದೆ.

ಆಧ್ಯತೆಗಳು, ಸೇವಾವಧಿಯಲ್ಲಿ ಒಮ್ಮೆ ಮಾತ್ರ ಆಧ್ಯತೆಯನ್ನು ಕ್ಷೇಮ್ ಮಾಡಲು ಅವಕಾಶವಿದೆ ಎಂದು ಇರುತ್ತದೆ. ಇದನ್ನು ವರ್ಗಾವಣೆ ಕಾಯ್ದೆ-2020 .ಜಾರಿಗೆ ಬಂದ ನಂತರ ಮಾತ್ರ ಅನ್ವಯವಾಗುವಂತೆ ಪರಿಗಣಿಸತಕ್ಕದ್ದು. ಇದು ಕೋರಿಕ ವರ್ಗಾವಣೆಗೆ ಅನ್ವಯವಾಗುತ್ತದೆ. ಆದರೆ ಹೆಚ್ಚುವರಿ ವರ್ಗಾವಣೆಗೆ ಅನ್ವಯವಾಗುವುದಿಲ್ಲ. 3. ಪತಿ-ಪತಿ, ಪ್ರಕರಣ ಹೆಚ್ಚುವರಿ ವರ್ಗಾವಣೆಯಲ್ಲಿ ಪತಿ ಪತ್ನಿ ಇವರಲ್ಲಿ ಒಬ್ಬರು ಜಿಲ್ಲೆಯಿಂದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಆಧ್ಯತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ. ಆದರೆ ಪತಿ ಪತ್ನಿ ಇಬ್ಬರೂ ಒಂದು ತಾಲ್ಲೂಕಿನಲ್ಲಿ, ಒಂದು ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹವರಿಗೆ ಹೆಚ್ಚುವರಿಯಲ್ಲಿ ಆಧ್ಯತೆಗೆ ಪರಿಗಣಿಸುವುದು ಎಂದು ಸೂಚನೆ ನೀಡಿದೆ.

ಸೇವಾ ಹಿರಿತನ ಶಿಕ್ಷಕರು ಒಂದು ದಿನ ಪೂರ್ವಾಹ್ನ ಅಥವಾ ಅಪರಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಪೂರ್ವಾಹ್ನ ಅಥವಾ ಅಪರಾಹ್ನ ಎಂಬುದನ್ನು ಪರಿಗಣಿಸದೇ, ಕರ್ತವ್ಯಕ ಹಾಜರಾದ ದಿನಾಂಕವನ್ನು ಮಾತ್ರ ಪರಿಗಣಿಸುವುದು, ಒಂದು ವೇಳೆ ಕರ್ತವ್ಯಕ್ಕೆ ಹಾಜರಾದ ದಿನಾಂಕ ಒಂದ ಆಗಿದ್ದಲ್ಲಿ ಅವರ ಜನ್ಮ ದಿನಾಂಕವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲು ಕ್ರಮವಹಿಸುವುದು. ಉಳಿದಂತೆ ಈಗಾಗಲೇ ನೀಡಿರುವ ಅಧಿಸೂಚನೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ವರ್ಗಾವಣಾ ಕಾಯ್ದೆ / ನಿಯಮಗಳನ್ನು ಗಮನಿಸಿ ಅದರಂತೆ ಕ್ರಮವಹಿಸಲು ಸೂಚಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now