Dailyhunt
BIGG NEWS : ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

BIGG NEWS : ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

Kannada News Now 2 years ago

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಾಲಾ ಶಿಕ್ಷಕರು ಆಜೀವ ಸದಸ್ಯತ್ವದ ಗುರುತಿನ ಚೀಟಿಗಳನ್ನು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕಛೇರಿ ವತಿಯಿಂದ ಒದಗಿಸಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು Online ಸೇವೆಗೆ ಒಳಪಡಿಸಲಾಗಿದ್ದು, Online ನೋಂದಣಿ ಕಾರ್ಯವನ್ನು ದಿನಾಂಕ: 13.10.2022ರಿಂದ ಲೋಕಾರ್ಪಣೆಗೊಳಿಸಲಾಗಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ/ಅನುದಾನಿತ ಶಾಲಾ ಶಿಕ್ಷಕರಿಗೆ, ಈಗಾಗಲೇ ನಿಧಿಯ ಸದಸ್ಯತ್ವ ಪಡೆದು ಆಜೀವ ಸದಸ್ಯತ್ವ ಕಾರ್ಡ್ ಪಡೆದಿದ್ದಲ್ಲಿ ಯಾವುದೇ ಶುಲ್ಕವಿಲ್ಲದೆ Onlineನಲ್ಲಿ ನೋಂದಣಿ ಮಾಡಿಕೊಂಡು ಹೊಸ ನೋಂದಣಿ ಸಂಖ್ಯೆಯೊಂದಿಗೆ ಕಾರ್ಡ್ ಆನ್‌ಲೈನ್‌ನಲ್ಲಿ ಪಡೆಯುವಂತೆ ಹಾಗೂ ಇದುವರೆಗೂ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಲ್ಲಿ ಆಜೀವ ಸದಸ್ಯತ್ವ ಪಡೆಯದಿರುವ ಶಿಕ್ಷಕರಿಗೆ ಕಡ್ಡಾಯವಾಗಿ Online ಮೂಲಕ ನಿಧಿಯಲ್ಲಿ ಸದಸ್ಯತ್ವ ಪಡೆಯುವಂತೆ ಸೂಚಿಸಲು ತಿಳಿಸಲಾಗಿದೆ.

ರಾಜ್ಯದ ಎಲ್ಲಾ ಪದವಿ ಪೂರ್ವ, ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ/ಅನುದಾನಿತ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ ಪದವಿ ಕಾಲೇಜು, ವಿಶ್ವವಿದ್ಯಾನಿಲಯಗಳು, ಎಲ್ಲ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಶಾಲಾ ಶಿಕ್ಷಕರು, ಉಪನ್ಯಾಸಕರನ್ನು ಕಡ್ಡಾಯವಾಗಿ ಅಜೀವ ಸದಸ್ಯತ್ವ Online ನೋಂದಣಿ ಪಡೆದುಕೊಳ್ಳಲು ಹಾಗೂ ಇದುವರೆಗೂ ಶಿಕ್ಷಕರ ಕಲ್ಯಾಣ ನಿಧಿ ಕಛೇರಿಯಲ್ಲಿ ಆಜೀವ ಸದಸ್ಯತ್ವ ಪಡೆಯದಿರುವ ಶಿಕ್ಷಕರಿಗೆ ಉಪನ್ಯಾಸಕರಿಗೆ ಕಡ್ಡಾಯವಾಗಿ Online ಮೂಲಕ ನಿಧಿಯಲ್ಲಿ ಸದಸ್ಯತ್ವ ಪಡೆಯುವ ಸಂಬಂದ ಸೂಕ್ತ ಮಾರ್ಗದರ್ಶನ ನೀಡಿ ಹೆಚ್ಚಿನ ಆಜೀವ ಸದಸ್ಯತ್ವ ಪಡೆಯಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now