Dailyhunt
BIGG NEWS : ರಾಜ್ಯದ ಶಾಲಾ ಶಿಕ್ಷಕಿಯರಿಗೆ ಮಹತ್ವದ ಮಾಹಿತಿ : ಶಿಕ್ಷಕಿಯರ `ಶಿಶುಪಾಲನಾ ರಜೆ' ಮಂಜೂರು

BIGG NEWS : ರಾಜ್ಯದ ಶಾಲಾ ಶಿಕ್ಷಕಿಯರಿಗೆ ಮಹತ್ವದ ಮಾಹಿತಿ : ಶಿಕ್ಷಕಿಯರ `ಶಿಶುಪಾಲನಾ ರಜೆ' ಮಂಜೂರು

Kannada News Now 4 years ago

ಬೆಂಗಳೂರು : ರಾಜ್ಯದ ಶಾಲಾ ಶಿಕ್ಷಕಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸರ್ಕಾರಿ ಶಾಲಾ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ಸೌಲಭ್ಯ ಮಂಜೂರಾಗಲಿದೆ.

ರಾಜ್ಯದ ಸಾಹಿತಿ,ಕಲಾವಿದರಿಗೆ ಗುಡ್ ನ್ಯೂಸ್ : ಮಸಾಶನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ

ಶಿಶುಪಾಲನಾ ರಜೆ ಮಂಜೂರು ಮಾಡುವಂತೆ ಶಿಕ್ಷಕಿಯರು ಮನವಿ ಮಾಡಿತ್ತು.

ಮನವಿಗೆ ಸ್ಪಂದಿಸಿರುವ ಅರ್ಥಿಕ ಇಲಾಖೆ ಇದೀಗ ಶಿಶುಪಾಲನಾ ರಜೆ ಮಂಜೂರು ಮಾಡಿದೆ.

ಬುದ್ದಿಮಾಂಧ್ಯ ಮತ್ತು ವಿಶೇಷಚೇತನ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರದ ಆಧಾರದ ಮೇಲೆ ಒಂದು ವರ್ಷದಲ್ಲಿ 3 ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆಯಿಲ್ಲದಂತೆ ಇಡೀ ಸೇವಾವಧಿಯಲ್ಲಿ 2 ವರ್ಷಗಳ ಅವಧಿಗೆ ಶಿಶುಪಾಲನಾ ರಜೆಯನ್ನು 2011 ರಲ್ಲಿ ಮಂಜೂರು ಮಾಡಿತ್ತು. ಇದೇ ಮಾದರಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸರ್ಕಾರಿ ಶಿಕ್ಷಕರಿಗೆ ಶಿಶುಪಾಲನಾ ರಜೆ ನೀಡಬಹುದು ಎಂದು ಆರ್ಥಿಕ ಇಲಾಖೆ ಸ್ಪಷ್ಟನೆ ನೀಡಿದೆ.

ರಾಜ್ಯದ ಮತದಾರರಿಗೆ ಮಾಹಿತಿ: ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022ರ ಕರಡು ಮತದಾರರ ಪಟ್ಟಿ ಪ್ರಕಟ, ಹೀಗೆ ಪರಿಶೀಲನೆ ಮಾಡಿ



Dailyhunt
Disclaimer: This content has not been generated, created or edited by Dailyhunt. Publisher: Kannada News Now