Dailyhunt
BIGG NEWS : ಸರ್ಕಾರಿ ನೌಕರರೇ ಗಮನಿಸಿ : ಚುನಾವಣಾ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅರೆಸ್ಟ್|Government Employees

BIGG NEWS : ಸರ್ಕಾರಿ ನೌಕರರೇ ಗಮನಿಸಿ : ಚುನಾವಣಾ ಕರ್ತವ್ಯಕ್ಕೆ ಹಾಜರಾಗದಿದ್ದರೆ ಅರೆಸ್ಟ್|Government Employees

Kannada News Now 2 years ago

ಬೆಳಗಾವಿ : ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಸರ್ಕಾರಿ ನೌಕರರಿಗೆ ಚುನಾವಣಾ ಆಯೋಗ್ ಬಿಗ್ ಶಾಕ್ ನೀಡಿದ್ದು, ಚುನಾವಣಾ ಕರ್ತವ್ಯಕ್ಕೆ ಬಾರದಿದ್ರೆ ಪೊಲೀಸರು ಮನೆಗೆ ಬಂದು ಅರೆಸ್ಟ್ ಮಾಡುತ್ತಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದ್ದು, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿಗಳೊಂದಿಗೆ ಚುನಾವಣಾ ಆಯೋಗ ಸಿದ್ಧವಾಗಿದ್ದು, ಸುಳ್ಳು ಹೇಳಿ ಚುನಾವಣಾ ಕರ್ತವ್ಯಕ್ಕೆ ತಪ್ಪಿಸಿಕೊಂಡರೆ ಎಫ್ ಐಆರ್ ದಾಖಲಿಸಿ ಅರೆಸ್ಟ್ ಮಾಡಲಾಗುವುದು ಎಂದು ಚುನಾವಣಾ ಆಯೋಗ ಖಡಕ್ ಸಂದೇಶ ರವಾನಿಸಿದೆ.

ಚುನಾವಣಾ ಆಯೋಗವು ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಹೆರಿಗೆ ಹಂತದಲ್ಲಿರುವ ಗರ್ಭಿಣಿಯರು, 3 ಅಥವಾ 4 ತಿಂಗಳು ಅವಧಿಯ ನಿವೃತ್ತಿ ಅಂಚಿನಲ್ಲಿರುವವರು ಹಾಗೂ ಗಂಭೀರವಾದ ಆರೋಗ್ಯ ಸಮಸ್ಯೆಯಿರುವವರು ಮಾತ್ರ ಚುನಾವಣಾ ಕರ್ತವ್ಯದಿಂದ ರಿಯಾಯಿತಿ ನೀಡಲಾಗಿದೆ.

ಮೇಲಾಧಿಕಾರಿ ಹಾಗೂ ಪ್ರಭಾವಿಗಳ ಮೂಲಕ ಹೇಳಿಸಿ, ಚುನಾವಣಾ ಕರ್ತವ್ಯದಿಂದ ದೂರ ಉಳಿಯಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now