
ವರದಿ : ವಸಂತ ಬಿ ಈಶ್ವರಗೆರೆ
ಬೆಂಗಳೂರು : ಜುಲೈ.10ರ ನಾಳೆಗೆ ಅಂತ್ಯಗೊಳ್ಳಲಿದ್ದಂತ ಸಿಇಟಿ-2021ರ ವೃತ್ತಿಪರ ಕೋರ್ಸ್ ಗಳ ಸೀಟುಗಳ ಆಯ್ಕೆಗಾಗಿ ನಡೆಯುವಂತ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ.16, 2021ರವರೆಗೆ ವಿಸ್ತರಣ ಮಾಡಲಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸ್ಪೋಟಕ ಬಾಂಬ್ ಸಿಡಿಸಿದ ಸಂಸದೆ ಸುಮಲತಾ : ಏನದು ಗೊತ್ತಾ.?
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸಿಇಟಿ-2021ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು, ಅನೇಕ ವಿದ್ಯಾರ್ಥಿಗಳು, ಪೋಷಕರು ಅರ್ಜಿ ಸಲ್ಲಿಸಲು ಅವಕಾಶ ನೀಡಲು ಕೋರಿರುವುದರಿಂದ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.
ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಸಿಇಟಿ-2021ಕ್ಕೆ ನೊಂದಣಿ ಮಾಡಿಕೊಳ್ಳದೇ ಇರುವ ವಿದ್ಯಾರ್ಥಿಗಳು ದಿನಾಂಕ 16-07-2021ರ ವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿ ಹಾಗೂ ಶುಲ್ಕವನ್ನು ದಿನಾಂಕ 19-07-2021ರವರೆಗೆ ಪಾವತಿಸಬಹುದಾಗಿ ಎಂದು ತಿಳಿಸಿದೆ.