Dailyhunt
Good News : 'ರಾಜ್ಯ ಸರ್ಕಾರಿ ನೌಕರ'ರಿಗೆ ಸಿಹಿಸುದ್ದಿ: 'ಹಬ್ಬದ ಮುಂಗಡ' ಮೊತ್ತ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ

Good News : 'ರಾಜ್ಯ ಸರ್ಕಾರಿ ನೌಕರ'ರಿಗೆ ಸಿಹಿಸುದ್ದಿ: 'ಹಬ್ಬದ ಮುಂಗಡ' ಮೊತ್ತ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ

Kannada News Now 4 years ago

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ( Karnataka Government Employees ) ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ನೌಕರರ ಸಂಘವು ಪತ್ರದ ಮೂಲಕ ಕೋರಿಕೊಂಡಿದೆ. ಒಂದು ವೇಳೆ ಸರ್ಕಾರ ನೌಕರರ ಮನವಿ ಪುರಸ್ಕರಿಸಿದ್ರೇ..

10 ಸಾವಿರದಿಂದ 25 ಸಾವಿರಕ್ಕೆ ಹಬ್ಬದ ಮುಂಗಡ ಮೊತ್ತದ ಹಣ ಹೆಚ್ಚಳವಾಗಲಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಪಿಎಸ್ ಷಡಾಕ್ಷರಿ ಅವರು, ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ದಿನಾಂಕ 28-10-2021ರಂದು ನಡೆದಂತ ಸಭೆಯಲ್ಲಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಿ ನೌಕರರ ಹಬ್ಬದ ಮುಂಗಡ ಹಣ ಹೆಚ್ಚಳ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ.

ಈ ನಿರ್ಣಯದಂತೆ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ, ರಾಜ್ಯ ಸರ್ಕಾರಿ ನೌಕರರ ಹಬ್ಬದ ಮುಂಗಡ ಮೊತ್ತವನ್ನು 10 ಸಾವಿರದಿಂದ 25 ಸಾವಿರಗಳಿಗೆ ಹೆಚ್ಚಳ ಮಾಡಿ ಆದೇಶಿಸುವಂತೆ ಕೋರಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರಿ ನೌಕರರ ಸಂಘದ ಕೋರಿಕೆ ಪರಿಗಣಿಸಿದ್ದಾದಲ್ಲಿ, ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ 25 ಸಾವಿರ ರೂಪಾಯಿ ಹಬ್ಬದ ಮುಂಗಡ ಹಣ ಸಿಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now