Dailyhunt Logo
  • Light mode
    Follow system
    Dark mode
    • Play Story
    • App Story
ಇನ್​​​ಸ್ಟಾಗ್ರಾಂನಲ್ಲಿ ಬರೋ ಲಿಂಕ್‌ ಮೇಲೆ ಕ್ಲಿಕ್ ಮಾಡೋ ಎಚ್ಚರ:  3.21 ಲಕ್ಷ ರೂ ಹಣ ಕಳೆದುಕೊಂಡ ಕೊಂಡ ಶಿಕ್ಷಕಿ

ಇನ್​​​ಸ್ಟಾಗ್ರಾಂನಲ್ಲಿ ಬರೋ ಲಿಂಕ್‌ ಮೇಲೆ ಕ್ಲಿಕ್ ಮಾಡೋ ಎಚ್ಚರ: 3.21 ಲಕ್ಷ ರೂ ಹಣ ಕಳೆದುಕೊಂಡ ಕೊಂಡ ಶಿಕ್ಷಕಿ

Kannada News Now 3 years ago

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣ ಇನ್​​ಸ್ಟಾಗ್ರಾಮ್​​ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿ ಶಿಕ್ಷಕಿಯೊಬ್ಬರು 3.21 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಮುಷ್ಟೂರು ಗ್ರಾಮದ ನಿವಾಸಿ ಕೆ.ರಾಗಿಣಿ ಎನ್ನುವರಿಗೆ ಇನ್​​​ಸ್ಟಾಗ್ರಾಂನಲ್ಲಿ ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಬಂದಿದೆ ಎನ್ನಲಾಗಿದೆ.

ಈ ನಡುವೆ ಅವರು ಅದರ ಮೇಲೆ ಕ್ಲಿಕ್‌ ಮಾಡಿದ ವೇಳೇಯಲ್ಲಿ ಹಣ ದ್ವಿಗುಣ ಮಾಡುವ ಬಗ್ಗೆ ಕೇಳಿಕೊಂಡಿರುವ ಮಾಹಿತಿ ತಿಳಿದು ಬಂದಿದೆ. ಇದನ್ನೇ ನಂಬಿದ ಅವರು ಹಣ ದ್ವಿಗುಣಗೊಳಿಸುವ ಆಸೆಯಲ್ಲಿ ಟ್ಟು 3,21,000 ರೂ, ಹಣವನ್ನು ಹೂಡಿಕೆ ಮಾಡಿದ್ದಾರೆ.

ಈ ನಡುವೆ ಬ್ಲಾಕ್ ಚೈನ್ ಆಯಪ್ ಅಕೌಂಟ್​​ನಲ್ಲಿ ರಾಗಿಣಿ ಹೆಸರಿನಲ್ಲಿ 10 ಲಕ್ಷ ಹಣ ಇರುವುದಾಗಿ ಕಾಣಿಸಿಕೊಂಡಿದೆ. ಇದನ್ನು ವರು ಡ್ರಾ ಮಾಡಿಕೊಳ್ಳುವುದಕ್ಕೆ ಮುಂದಾದ ವೇಳೆಯಲ್ಲಿ ಅವರಿಗೆ ಹಣ ಬಾರದೇ ಇರೋದು ಗಮನಕ್ಕೆ ಬಂದಿದೆ. ಇನ್ನೂ ಸಂಬಂಧಪಟ್ಟ ಕಂಪನಿಗೆ ಕರೆ ಮಾಡಲು ಅವರು ಯತ್ನ ಮಾಡಿದ ವೇಳೆಯಲ್ಲಿ ಅವರಿಂದ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಇನ್ನೂ ತಮಗೆ ಆಗಿರುವ ಮೋಸಕ್ಕೆ ಸದ್ಯ ಅವರು ಚಿಕ್ಕಬಳ್ಳಾಪುರ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.


Dailyhunt
Disclaimer: This content has not been generated, created or edited by Dailyhunt. Publisher: Kannada News Now