Dailyhunt Logo
  • Light mode
    Follow system
    Dark mode
    • Play Story
    • App Story
'ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ' : ಬಿಜೆಪಿ ನಾಯಕರಿಗೆ ಕುಟುಕಿದ ಡಿ.ಕೆ.ಶಿವಕುಮಾರ್

'ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ' : ಬಿಜೆಪಿ ನಾಯಕರಿಗೆ ಕುಟುಕಿದ ಡಿ.ಕೆ.ಶಿವಕುಮಾರ್

Kannada News Now 5 years ago

ಬೆಂಗಳೂರು : ಮೂರು ಪಾಲಿಕೆ ಚುನಾವಣಾ ಫಲಿತಾಂಶ ಯಾವುದೇ ದಿಕ್ಸೂಚಿಯಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಚುನಾವಣಾ ಫಲಿತಾಂಶ ಮುಬರುವ ಚುನಾವಣೆಗೆ ದಿಕ್ಯೂಚಿ ಎಂದು ಬಣ್ಣಿಸಿದ್ದಕ್ಕೆ ವ್ಯಂಗ್ಯವಾಡಿದರು.

ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಿಟ್ಟಿದ್ದೇವೆ ಎಂದು ಹೇಳಿದ್ದೀರಿ. ಬಿಬಿಎಂಪಿ‌ ಚುನಾವಣೆ ನಡೆಸಿ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆ ನಡೆಸಿ, ಯಾಕೆ ಚುನಾವಣೆಗಳನ್ನು ಮುಂದೂಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೇ, ಈ ಚುನಾವಣೆಗಳ್ಲಲಿ ಕಾಂಗ್ರೆಸ್ ಪಕ್ಷದ ಶಕ್ತಿ ಏನು ಅಂತ ಗೊತ್ತಾಗುತ್ತದೆ ಎಂದರು.

ನಿಫಾ ವೈರಸ್ ಭೀತಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ನಿಫಾ ಅಲರ್ಟ್' ಘೋಷಣೆ

ಇನ್ನು ಕಾರ್ಪೊರೇಷನ್ ಚುನಾವಣೆ ತೃಪ್ತಿ ತಂದಿದೆ. ಕಲ್ಬುರ್ಗಿಯಲ್ಲಿ ನಾವುಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಹುಬ್ಬಳ್ಳಿಯಲ್ಲಿ 33 ಸ್ಥಾನ ಗೆದ್ದಿದ್ದೇವೆ. ಕಳೆದ ಬಾರಿ ನಾವು ಕಡಿಮೆ ಗೆದ್ದಿದ್ದೆವು. ತರೀಕೆರೆಯಲ್ಲಿ ನಾವು ಗೆದ್ದಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿ ಹಾಕಿದ್ದಾರೆ ಎಂದು ಹರಿಹಾಯ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ತಾವು ಬೇರೆ ಬೇರೆ ಬಣ ಎಂದು ಹೇಳಲಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆಯಶಿವಕುಮಾರ್, ಇದು ಮಾಧ್ಯಮಗಳ ಸೃಷ್ಠಿಯಷ್ಟೇ. ನಮ್ಮದ ಒಂದೇ ಬಣ, ಕಾಂಗ್ರೆಸ್ ಬಣ ಎಂದರು…

ಬೆಂಗಳೂರಿಗರೇ ಗಮನಿಸಿ : ಗಣೇಶ ಮೂರ್ತಿ ಪ್ರತಿಷ್ಠಾಪನೆ ವೇಳೆ 'ಈ ರೂಲ್ಸ್ ' ಫಾಲೋ ಮಾಡ್ಲೇಬೇಕು..



Dailyhunt
Disclaimer: This content has not been generated, created or edited by Dailyhunt. Publisher: Kannada News Now