Dailyhunt Logo
  • Light mode
    Follow system
    Dark mode
    • Play Story
    • App Story
'ರಾಜ್ಯ ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ : 'ತುಟ್ಟಿಭತ್ಯೆ ಶೇ.11ರಷ್ಟು' ಬಿಡುಗಡೆಗೆ 'ಸಿಎಂ ಆದೇಶ'

'ರಾಜ್ಯ ಸರ್ಕಾರಿ ನೌಕರ'ರಿಗೆ ಭರ್ಜರಿ ಸಿಹಿಸುದ್ದಿ : 'ತುಟ್ಟಿಭತ್ಯೆ ಶೇ.11ರಷ್ಟು' ಬಿಡುಗಡೆಗೆ 'ಸಿಎಂ ಆದೇಶ'

Kannada News Now 4 years ago

ಬೆಂಗಳೂರು : ಈಗಾಗಲೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಹೆಚ್ ಆರ್ ಎ ಕೂಡ ಏರಿಕೆ ಮಾಡಿ ಆದೇಶಿಸಿ ಡಬಲ್ ಗಿಫ್ಟ್ ನೀಡಿತ್ತು. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರಿ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆಯನ್ನು ನೀಡೋದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ.

ಈ ಸಲ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 100 ರಷ್ಟು ಅಂಕ ಗಳಿಸಿದವರೆಷ್ಟು ಗೊತ್ತೇ?

ಈ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದಂತ ಸಿ ಎಸ್ ಷಡಾಕ್ಷರಿ , ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ, ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ, ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ತೆ ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ.

Breaking News : ಭಾರತದಲ್ಲಿ 40 ಕೋಟಿ ಜನ ಕೊರೊನಾ ಸೋಂಕಿನ ಅಪಾಯದಲ್ಲಿದ್ದಾರೆ : 4ನೇ ಸೆರೋ ಸಮೀಕ್ಷೆ

ಪ್ರಸ್ತುತ ಕೇಂದ್ರ ಸರ್ಕಾರವು ದಿನಾಂಕ 01-07-2021ರಿಂದ ಪೂರ್ವಾನ್ವಯವಾಗಿ ತನ್ನ ನೌಕರರಿಗೆ ಶೇ.11ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ, ಆದೇಶ ಹೊರಡಿಸಿದೆ. ಆದ್ದರಿಂದ ತಾವು ದಯಮಾಡಿ, ಪ್ರಸ್ತುತ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ, ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದೆ ತುಟ್ಟಿಭತ್ಯೆಯಲ್ಲಿ ಬಾಕಿ ಉಳಿದಿರುವ ಭಿನ್ನಾಂಶವನ್ನು ಸೇರ್ಪಡೆ ಮಾಡಿ, ದಿನಾಂಕ 01-07-2021ರಿಂದ ಪೂರ್ವಾನ್ವಯವಾಗಿ ಶೇ.11ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆಗೊಳಿಸಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.

ʼPM Kisanʼ ಯೋಜನೆಯ ಲಾಭ ಪಡೆಯುತ್ತಿರುವ ʼಅನರ್ಹ ರೈತರೇʼ ಎಚ್ಚರ : 42 ಲಕ್ಷ ರೈತರಿಂದ ʼ3000 ಕೋಟಿ ರೂ.ʼ ವಸೂಲಿ ಮಾಡ್ತಿದೆ ಸರ್ಕಾರ

ಈ ಮನವಿಯನ್ನು ಪರಿಗಣಿಸಿರುವಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಬಾಕಿ ಇರುವ ತಟ್ಟು ಭತ್ಯೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ಮೂಲಕ, ಶೇ.11ರಷ್ಟು ತುಟ್ಟಿಭತ್ಯೆ ಬಿಡುಗಡೆ ರಾಜ್ಯ ಸರ್ಕಾರ ಅನುಮತಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

Big Breaking News : ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ, ಫಲಿತಾಂಶ ನೋಡಲು ಹೀಗೆ ಮಾಡಿ,



Dailyhunt
Disclaimer: This content has not been generated, created or edited by Dailyhunt. Publisher: Kannada News Now