Dailyhunt Logo
  • Light mode
    Follow system
    Dark mode
    • Play Story
    • App Story
38 ಎಸೆತದಲ್ಲಿ 93 ರನ್‌ ಸಿಡಿಸಿದ ಸೂರ್ಯವಂಶಿ: ರಾಜಸ್ಥಾನ್‌ ಪ್ಲೇಆಫ್‌ ಆಸೆ ಜೀವಂತ

38 ಎಸೆತದಲ್ಲಿ 93 ರನ್‌ ಸಿಡಿಸಿದ ಸೂರ್ಯವಂಶಿ: ರಾಜಸ್ಥಾನ್‌ ಪ್ಲೇಆಫ್‌ ಆಸೆ ಜೀವಂತ

Kannadavahini 1 week ago

ಸ್ಫೋಟಕ ಬ್ಯಾಟ್ಸ್‌ ಮನ್‌ ವೈಭವ್‌ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ 7 ವಿಕೆಟ್‌ ಗಳಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಸೋಲಿಸಿ ಐಪಿಎಲ್‌ ಟಿ-20 ಟೂರ್ನಿಯ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 5 ವಿಕೆಟ್‌ ಗೆ 225 ರನ್‌ ಸಂಪಾದಿಸಿತು.

ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್‌ ರಾಯಲ್ಸ್‌ ೫ ಎಸೆತಗಳು ಬಾಕಿ ಇರುವಂತೆಯೇ ೩ ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಈ ಗೆಲುವಿನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ 13 ಪಂದ್ಯಗಳಲ್ಲಿ 7 ಜಯ ಹಾಗೂ 6 ಸೋಲಿನೊಂದಿಗೆ 14 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್‌ ಆಸೆ ಜೀವಂತವಾರಿಸಿಕೊಂಡಿತು. ಈಗಾಗಲೇ ಪ್ಲೇಆಫ್‌ ರೇಸ್‌ ನಿಂದ ಹೊರಬಿದ್ದಿರುವ ಎಲ್‌ ಎಸ್‌ ಜಿ 9ನೇ ಸೋಲಿನೊಂದಿಗೆ ಕೊನೆಯ ಸ್ಥಾನ ಖಚಿತಪಡಿಸಿಕೊಂಡಿತು.

ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್‌ ಗೆ ವೈಭವ್‌ ಸೂರ್ಯವಂಶಿ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್‌ ಸಹಾಯದಿಂದ 93 ರನ್‌ ಸಿಡಿಸಿದರು. ಆದರೆ ಮೊಹಸಿನ್‌ ಖಾನ್‌ ಗೆ ವಿಕೆಟ್‌ ಒಪ್ಪಿಸುವ ಮೂಲಕ 7 ರನ್‌ ಗಳಿಂದ ಶತಕ ವಂಚಿತರಾದರು.

ವೈಭವ್‌ ಮತ್ತು ಯಶಸ್ವಿ ಜೈಸ್ವಾಲ್‌ ಮೊದಲ ವಿಕೆಟ್‌ ಗೆ 75 ರನ್‌ ಜೊತೆಯಾಟ ನಿಭಾಯಿಸಿದರೆ, ನಂತರ ಧ್ರುವ ಜುರೆಲ್‌ ಜೊತೆ 105 ರನ್‌ ಜೊತೆಯಾಟವನ್ನು ವೈಭವ್‌ ಪಾಲ್ಗೊಂಡರು. ಯಶಸ್ವಿ ಜೈಸ್ವಾಲ್‌ (43) ಮತ್ತು ಧ್ರುವ ಜುರೆಲ್‌ (ಅಜೇಯ 53) ತಂಡದ ಗೆಲುವಿನಲ್ಲಿ ಉತ್ತಮ ಕಾಣಿಕೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಮಿಚೆಲ್‌ ಮಾರ್ಷ್‌ 57 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್‌ ಸಹಾಯದಿಂದ 96 ರನ್‌ ಗಳಿಸಿದರು, ಅಲ್ಲದೇ ಜೋಷ್‌ ಇಂಗ್ಲೀಸ್‌ ಮೊದಲ ವಿಕೆಟ್‌ ಗೆ 102 ರನ್‌ ಪೇರಿಸಿ ಉತ್ತಮ ಆರಂಭ ನೀಡಿದರು.

ಜೋಸ್‌ ಇಂಗ್ಲೀಸ್‌ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡ 60 ರನ್‌ ಗಳಿಸಿದರು. ನಾಯಕ ರಿಷಭ್‌ ಪಂತ್‌ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡ 35 ರನ್‌ ಚಚ್ಚಿದರು.

Dailyhunt
Disclaimer: This content has not been generated, created or edited by Dailyhunt. Publisher: Kannadavahini