Dailyhunt
8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆ: ಭಾರತದಲ್ಲಿ ಮೊದಲ ಬಾರಿ!

8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆ: ಭಾರತದಲ್ಲಿ ಮೊದಲ ಬಾರಿ!

Kannadavahini 4 years ago

ಹೈದರಾಬಾದ್ ಮೃಗಾಲಯದಲ್ಲಿನ 8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಇದೇ ಮೊದಲ ಬಾರಿ ಸಿಂಹಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ.

ಹೈದರಾಬಾದ್ ನೆಹರು ಜೂಲಾಜಿಕಲ್ ಪಾರ್ಕ್ ನಲ್ಲಿ ಮಂಳವಾರ 8 ಸಿಂಹಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದೇ ಮೊದಲ ಬಾರಿ ಭಾರತದ ಪ್ರಾಣಿ ಅಥವಾ ಸಿಂಹಗಳಲ್ಲಿ ಕೊರೊನಾ ಕಂಡು ಬಂದಿದೆ.

ಏಪ್ರಿಲ್ 19ರಂದು ಮೃಗಾಲಯದಲ್ಲಿದ್ದ 4 ಹೆಣ್ಣು ಮತ್ತು 4 ಗಂಡು ಸಿಂಹಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆರ್ ಟಿಸಿಪಿಆರ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

ಸಿಂಹಗಳು ಸದ್ಯಕ್ಕೆ ಆರೋಗ್ಯವಾಗಿದ್ದು, ಆಹಾರವನ್ನು ಸಹಜವಾಗಿ ಸ್ವೀಕರಿಸುತ್ತಿವೆ. ಆಹಾರ ಸೇವನೆ ಬಗ್ಗೆ ಗಮನ ಹರಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಸಿಸಿಎಂಬಿ ನಿರ್ದೇಶಕ ಡಾ.

ಸುರೇಶ್ ಮಿಶ್ರಾ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini