Dailyhunt
ಅಮೆರಿಕದ ಮಾರಕ ದಾಳಿಗೆ ಇರಾನ್‌ ನ ಅತೀ ದೊಡ್ಡ ಸೇತುವೆ ಕುಸಿತ!

ಅಮೆರಿಕದ ಮಾರಕ ದಾಳಿಗೆ ಇರಾನ್‌ ನ ಅತೀ ದೊಡ್ಡ ಸೇತುವೆ ಕುಸಿತ!

Kannadavahini 3 weeks ago

ಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನ್‌ ನ ಅತೀ ದೊಡ್ಡ ಸೇತುವೆ ಸ್ಫೋಟಗೊಂಡು ಕುಸಿದುಬಿದ್ದಿದೆ.

ಇರಾನ್‌ ನ ರಾಜಧಾನಿ ಟೆಹರಾನ್‌ ಮತ್ತು ಪಶ್ಚಿಮ ನಗರ ಖಾರ್ಗ್‌ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತಿದ್ದ ಬೃಹತ್‌ ಸೇತುವೆ ಇದಾಗಿದ್ದು, ಗುರುವಾರ ನಡೆಸಿದ ದಾಳಿಯಲ್ಲಿ ಕುಸಿದುಬಿದ್ದಿದೆ.

ಸೇತುವೆ ಸ್ಫೋಟಿಸಿದ ವೀಡಿಯೋ ಮತ್ತು ಫೋಟೊಗಳನ್ನು ಅಮೆರಿಕ ಹಂಚಿಕೊಂಡಿದ್ದು, ಇನ್ನಷ್ಟು ದಾಳಿಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಮಧ್ಯಪ್ರಾಚ್ಯದ ಪ್ರಮುಖ ಆಕರ್ಷಣೆ ಆಗಿದ್ದ ಈ ಸೇತುವೆ ೧೩೬ ಮೀಟರ್‌ ಎತ್ತರ ಹೊಂದಿದ್ದು, ಇಂಜಿನಿಯರಿಂಗ್‌ ನ ಅತೀ ದೊಡ್ಡ ಮಾಸ್ಟರ್‌ ಪೀಸ್‌ ಆಗಿ ಗಮನ ಸೆಳೆಯಬೇಕಿತ್ತು. ಆದರೆ ನಿರ್ಮಾಣ ಹಂತದಲ್ಲೇ ಈ ಸೇತುವೆ ಕುಸಿತ ಕಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini