Dailyhunt
ಬೆಂಗಳೂರಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ: ಹೈಕೋರ್ಟ್ ಮಹತ್ವದ ತೀರ್ಪು

Kannadavahini 4 years ago

ಬೆಂಗಳೂರು ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ‌ಗುರುತಿಸಿ ಯಾರಿಗೂ ಹೆದರದೇ ನೆಲಸಮ ಮಾಡಿ ಎಂದು ಹೈಕೋರ್ಟ್ ಬಿಬಿಎಂಪಿಗೆ ತಾಕೀತು ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರನ್ನೊಳಗೊಂಡ ವಿಭಾಗೀಯ ಪೀಠ ಬುಧವಾರ ಬಿಬಿಎ0ಪಿ ಮುಖ್ಯ ಆಯುಕ್ತರಿಗೆ ತಾಕೀತು ಮಾಡಿದೆ.

ಮೊದಲು‌ ನ್ಯಾಯಾಲಯ ಹೊರಡಿಸಿದ ಆದೇಶ ಏಕೆ ಪಾಲಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಯಾರಿಗೂ ಹೆದರಬೇಡಿ, ಎಷ್ಟೆ ದೊಡ್ಡವರಾದ್ದರೂ ಕೇರ್ ಮಾಡಬೇಡಿ. ಒಡೆದು ಹಾಕಿ. ನಿಮಗೆ ಯಾರಾದರೂ ಒತ್ತಡ ಹಾಕುತ್ತಿದ್ದಾರ ಎಂದು ಪ್ರಶ್ನಿಸಿದರು.

ಡಿಸಂಬರ್ 2ರೊಳಗೆ ಅನಧಿಕೃತ ಕಟ್ಟಡಗಳನ್ನು ತರೆವುಗೊಳಿಸುವ ಅನುಪಾಲನ ವರದಿಯನ್ನು ಸಲ್ಲಿಸಬೇಕು. ತಾವು ಹಾಜರಾಗಬೇಕು. ವಿನಾಯಿತಿ‌ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿತು.

ಕೋರ್ಟ್ ಗೆ ಬಿಬಿಎಂಪಿ ನೀಡಿರುವ ಪ್ರಮಾಣಪತ್ರದಲ್ಲಿ ಎರಡು ರೀತಿ ಇದೆ. ಒಂದು ನಕ್ಷೆ ಪಡೆದು ಉಲ್ಲಘನೆ ಮಾಡಿ ಕಟ್ಟಿರುವುದು. ಮತ್ತೊಂದು ನಕ್ಷೆ ಪಡೆಯದೇ ಅನಧಿಕೃತವಾಗಿ ಕಟ್ಟಿರುವುದು. 2020ರ ನಂತರ ನಿರ್ಮಾಣವಾದ 5,905 ಕಟ್ಟಡಗಳನ್ನು‌ ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ 4.279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿದೆ. ಅವುಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆದಿದೆ. 2.591 ಕಟ್ಟಡಗಳ ಸರ್ವೆ ನಡೆಸಬೇಕಾಗಿದೆ ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini