Dailyhunt
ಬೆಂಗಳೂರಿನಲ್ಲಿ ಹೆಚ್ಚಿದ ಡೆಲ್ಟಾ ರೂಪಾಂತರಿ ಪ್ರಕರಣ: ಬಿಬಿಎಂಪಿಯಿಂದ ಕಠಿಣ ಕ್ರಮ ಜಾರಿ

ಬೆಂಗಳೂರಿನಲ್ಲಿ ಹೆಚ್ಚಿದ ಡೆಲ್ಟಾ ರೂಪಾಂತರಿ ಪ್ರಕರಣ: ಬಿಬಿಎಂಪಿಯಿಂದ ಕಠಿಣ ಕ್ರಮ ಜಾರಿ

Kannadavahini 4 years ago

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಂದ ರೂಪಾಂತರ ಪಡೆದಿದ್ದ ಡೆಲ್ಟಾ ವೈರಸ್ ನ ಹೊಸ ರೂಪಾಂತರಿ AY.4.2 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಸೋಂಕು ಹರಡದಂತೆ ತಡೆಯಲು ಹಲವು ಕಠಿಣ ಕ್ರಮ ಜಾರಿ ಮಾಡಿದೆ.

ಜಿನೋಮ್​ ಸೀಕ್ವೆನ್ಸಿಂಗ್​​ ಟೆಸ್ಟ್​ನಲ್ಲಿ ನಗರದಲ್ಲಿ ರೂಪಾಂತರಿ 3 ಕೇಸ್​ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 7 ಕೇಸ್ ದೃಢಪಟ್ಟಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ.

ಬಿಬಿಎಂಪಿ ಕೈಗೊಂಡ ಕ್ರಮಗಳು

ಹೆಚ್ಚೆಚ್ಚು ಸ್ಯಾಂಪಲ್​ಗಳನ್ನ ಪಡೆದು ಜಿನೋಮ್​​ ಸೀಕ್ವೆಂನ್ಸಿಂಗ್​​​ ಟೆಸ್ಟ್​ಗೆ ಒಳಪಡಿಸುವುದು

ನಿತ್ಯದ ಕೇಸ್​ಗಳು, ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆ, ಸಂಪರ್ಕಿತರ ಸಂಖ್ಯೆ ಮೇಲೆ ಹದ್ದಿನ ಕಣ್ಣು

AY.4.2 ಸಬ್​ ವೇರಿಯಂಟ್​​ ಬಗ್ಗೆ ಹೆಚ್ಚಿನ ಅಧ್ಯಯನಕ್ಕೊಳಪಡಿಸೋದು

ಹೊಸ ರೂಪಾಂತರಿ ಕಾಣಿಸಿಕೊಂಡಿರುವವರ ಸಂಪರ್ಕಿತರ ಐಸೋಲೇಶನ್​​

ರೂಪಾಂತರಿ ವೈರಸ್​ಗಳ ಅಧ್ಯಯನಕ್ಕೆ ಹೆಚ್ಚು ಒತ್ತು

ಕೇಂದ್ರ ರಾಜ್ಯ ಸರ್ಕಾರ ಜಾರಿಗೊಳಿಸಿರೊ ಕೊರೊನಾ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಜಾರಿ

ಮಾಸ್ಕ್​​​, ಸಾಮಾಜಿಕ ಅಂತರ ಕಾಪಾಡಿಕೊಳ್ಳೋ ನಿಟ್ಟಿನಲ್ಲಿ ಮತ್ತೆ ಜಾಗೃತಿ

ಜನ ಗುಂಪು ಸೇರದಂತೆ ನೋಡಿಕೊಳ್ಳಲು ಮಾರ್ಷಲ್ಸ್ಗೆ ಸೂಚನೆ

ಪ್ರತಿಯೊಬ್ಬ ಅರ್ಹರಿಗೂ ಶೀಘ್ರದಲ್ಲೇ ವ್ಯಾಕ್ಸಿನೇಶನ್​​ ಹಾಕುವುದು

ರೂಪಾಂತರಿ ವೈರಸ್​ ಪತ್ತೆಯಾಗಿರೊ ಲ್ಯಾಬ್​​ ತಜ್ಞರೊಂದಿಗೆ ನಿರಂತರ ಚರ್ಚೆ

ಸರ್ಕಾರ ಸೂಚಿಸಿದ್ರೆ ಅಂತರ್ ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್​ ಗೆ ತಯಾರಿ

Dailyhunt
Disclaimer: This content has not been generated, created or edited by Dailyhunt. Publisher: Kannadavahini