Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ ಮಾವಿನಹಣ್ಣು ಆಮದು ನಿಷೇಧಿಸಿದ ಜಪಾನ್

ಭಾರತದ ಮಾವಿನಹಣ್ಣು ಆಮದು ನಿಷೇಧಿಸಿದ ಜಪಾನ್

Kannadavahini 2 days ago

ಭಾರತದಿಂದ ಬರುತ್ತಿದ್ದ ಮಾವಿನ ಹಣ್ಣುಗಳಲ್ಲಿ ರಾಸಾಯನಿಕ ಬಳಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಾವಿನ ಹಣ್ಣುಗಳ ಆಮದು ಮಾಡಿಕೊಳ್ಳುವುದನ್ನು ಜಪಾನ್‌ ನಿಷೇಧಿಸಿದೆ.

ಭಾರತದಿಂದ ಜಪಾನ್‌ ಗೆ 20 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಮಾವಿನಹಣ್ಣುಗಳು ರಫ್ತು ಮಾಡಲಾಗುತ್ತಿತ್ತು.

ಆದರೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಮಾವಿನಹಣ್ಣಿನ ಗುಣಮಟ್ಟ ಪರಿಶೀಲಿಸಿದಾಗ ರಾಸಾಯನಿಕ ಬಳಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಪಾನ್‌ ಸರ್ಕಾರ ಮಾವಿನ ಹಣ್ಣು ನಿಷೇಧಿಸಿದೆ.

20 ವರ್ಷಗಳಲ್ಲಿ ಇದೇ ಮೊದಲ ಬಾರಿ ಜಪಾನ್‌ ಭಾರತೀಯ ಮಾವಿನ ಹಣ್ಣುಗಳನ್ನು ನಿಷೇಧಿಸಿದೆ. ಕಳೆದ ಬಾರಿ ಅಂದರೆ 2206ರಲ್ಲಿ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಹಣ್ಣುಗಳ ಆಮದು ಅಮಾನತು ಮಾಡಲಾಗಿತ್ತು.

ವಿದೇಶದಿಂದ ಬರುವ ಹಣ್ಣುಗಳಲ್ಲಿ ಶೂನ್ಯ ರಾಸಾಯನಿಕ ಬಳಕೆ ನಿಯಮ ಪಾಲಿಸುತ್ತಿದೆ. ರಾಸಾಯನಿಕ ಬಳಕೆ ವಸ್ತುಗಳು ದೇಶಕ್ಕೆ ಪ್ರವೇಶಿಸಿದರೆ ದೇಶೀಯ ಕೃಷಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಜಪಾನ್‌ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಭಾರತದಿಂದ ಆಮದು ಆಗುವ ಮಾವಿನ ಹಣ್ಣುಗಳನ್ನು ಕ್ವಾರಂಟೈನ್‌ ಮಾದರಿಯ ಕೆಲವು ದಿನಗಳ ಕಾಲ ಒಂದು ಕಡೆ ಇಟ್ಟು ಪರಿಶೀಲನೆ ನಡೆಸಲಾಗುತ್ತದೆ..

Dailyhunt
Disclaimer: This content has not been generated, created or edited by Dailyhunt. Publisher: Kannadavahini