Dailyhunt Logo
  • Light mode
    Follow system
    Dark mode
    • Play Story
    • App Story
ಗುರುದ್ವಾರ ಕೇರ್ ಸೆಂಟರ್ ಗೆ ಅಮಿತಾಭ್ ಬಚ್ಚನ್ 2 ಕೋಟಿ ರೂ. ದೇಣಿಗೆ

ಗುರುದ್ವಾರ ಕೇರ್ ಸೆಂಟರ್ ಗೆ ಅಮಿತಾಭ್ ಬಚ್ಚನ್ 2 ಕೋಟಿ ರೂ. ದೇಣಿಗೆ

Kannadavahini 5 years ago

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ದೆಹಲಿಯ ಗುರುದ್ವಾರದ ರಕಬ್ ಗಂಜ್ ಕೋವಿಡ್ ಕೇರ್ ಸೆಂಟರ್ ಗೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಸಿಖ್ಖರು ದಂತಕತೆಗಳು ಅವರ ಸೇವೆಗೆ ಧನ್ಯವಾದಗಳು ಎಂದು ಅಮಿತಾಭ್ ಬಚ್ಚನ್ ದೇಣಿಗೆ ನೀಡುವ ಸಂದರ್ಭದಲ್ಲಿ ಷರಾ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಕಾಲಿದಳ ವಕ್ತಾರ ಹಾಗೂ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿಯೂ ಆದ ಸಿರ್ಸಾ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಪ್ರತಿದಿನ ಕೋವಿಡ್ ಸೆಂಟರ್ ವ್ಯವಸ್ಥೆಯ ಬಗ್ಗೆ ವಿಚಾರಿಸುತ್ತಿದ್ದರು. ಇದೀಗ ವಿದೇಶದಿಂದ ಆಕ್ಸಿಜನ್ ಕಂಟೆಂಟರ್ಸ್ ತರಿಸುವ ಬಗ್ಗೆಯೂ ಭರವಸೆ ನೀಡಿದ್ದಾರೆ ಎಂದು ಸಿರ್ಸಾ ತಿಳಿಸಿದರು.

ದೆಹಲಿಯಲ್ಲಿ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗುರುದ್ವಾರದಲ್ಲಿ 300 ಹಾಸಿಗೆಗಳ ಕೋವಿಡ್ ಸೆಂಟರ್ ಸೋಮವಾರ ಉದ್ಘಾಟನೆ ಆಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini