Dailyhunt Logo
  • Light mode
    Follow system
    Dark mode
    • Play Story
    • App Story

ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ

Kannadavahini 5 days ago

ನವದೆಹಲಿ: ಮದುವೆ ಆಗಿ ಭಾರತಕ್ಕೆ ಬಂದ ಮೇಲೆ ನನ್ನ ಜೀವನದಲ್ಲಿ ನಡೆದ ಎರಡು ದುರಂತ ಘಟನೆಗಳಿಂದ ತಲ್ಲಣಿಸಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿ ತಮ್ಮ ಜೀವನಾನುಭವ ಕುರಿತ `ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವನ್ನು ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜೊತೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕದ ಬಗ್ಗೆ ಅದ್ಭುತ ಪ್ರತಿಕ್ರಿಯೆ ಬಂದಿರುವುದರಿಂದ ತುಂಬಾ ಭಾವುಕಳಾಗಿದ್ದೇನೆ ಎಂದರು.

ನಾನು ನನ್ನ ನೆನಪುಗಳ ಆಧಾರದ ಮೇಲೆ ಪುಸ್ತಕ ಬರೆದಿದ್ದೇನೆ. ಪುಸ್ತಕ ಬರೆಯುವ ಆಲೋಚನೆಯೇ ಇರಲಿಲ್ಲ. ಆದರೆ ರಾಹುಲ್ ಮತ್ತು ಪ್ರಿಯಾಂಕಾ ಅವರ ಸಲಹೆ ಮೇರೆಗೆ ಈ ಧೈರ್ಯ ಮಾಡಿದೆ ಎಂದು ಅವರು ಹೇಳಿದರು.

ವಿವಾಹ ಆಗಿ ಭಾರತಕ್ಕೆ ಬಂದಾಗ ಮನೆ ಹಾಗೂ ಸಮಾಜದ ವಾತಾವರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಹೊರಗಡೆಯಿಂದ ಒಂದು ಕುಟುಂಬಕ್ಕೆ ಬಂದಾಗ ನಮ್ಮನ್ನು ಇಷ್ಟಪಡುವುದು ಬಿಡುವುದಕ್ಕಿಂತ ಗಮನಿಸುವವರೇ ಹೆಚ್ಚು. ಹಾಗಾಗಿ ನಾನು ಸಾಕಷ್ಟು ಮುಜುಗರದಿಂದಲೇ ಪರಿಸ್ಥಿತಿ ಎದುರಿಸಿದೆ ಎಂದರು.

ಮದುವೆ ಆಗಿ ಬಂದಾಗ ಅತ್ತೆ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ಅವರನ್ನು ನೋಡಿ ನಾವು ಅದ್ಭುತ ಎಂದು ಭಾವಿಸಿದ್ದೆ. ಅವರನ್ನು ನೋಡಿ ನನಗೆ ಹೆದರಿಕೆ ಆಗುತ್ತಿತ್ತು. ಆದರೆ ಮದುವೆ ಆದ ನಂತರ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯಂತಹ ದುರಂತ ನನ್ನನ್ನು ತಲ್ಲಣಿಸುವಂತೆ ಮಾಡಿತು ಎಂದು ಅವರು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿಕೆ ಶಿವಕುಮಾರ್, ತಮಿಳುನಾಡು ಸಿಎಂ ವಿಜಯ್ ಜೋಸೆಫ್, ಅಖಿಲೇಶ್ ಯಾದವ್, ರೇವಂತ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

👑
JOIN OUR COMMUNITY
✈️Get Latest Updates, News, Offers & More


WhatsApp Group


Telegram Channel


Facebook Group


Facebook Page


Instagram

Dailyhunt
Disclaimer: This content has not been generated, created or edited by Dailyhunt. Publisher: Kannadavahini