Dailyhunt Logo
  • Light mode
    Follow system
    Dark mode
    • Play Story
    • App Story
ಇನ್ನೆರಡು ದಿನದಲ್ಲಿ ಇರಾನ್‌ ಮೇಲೆ ಭೀಕರ ದಾಳಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಇನ್ನೆರಡು ದಿನದಲ್ಲಿ ಇರಾನ್‌ ಮೇಲೆ ಭೀಕರ ದಾಳಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

Kannadavahini 1 week ago

ಸಂಧಾನ ಮಾತುಕತೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಇರಾನ್‌ ಮೇಲೆ ಹೊಸದಾಗಿ ದಾಳಿ ನಡೆಸುವುದಾಗಿ ಹೇಳಿದ್ದಾರೆ.

ಶಾಂತಿ ಮಾತುಕತೆ ನಡೆಸಲು ಘೋಷಿಸಿದ್ದ ಕದನ ವಿರಾಮದ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಕದನ ವಿರಾಮ ಮುಂದೂಡುವುದಿಲ್ಲ.

ಬದಲಾಗಿ ಹೊಸದಾಗಿ ದಾಳಿ ಮಾಡುವುದಾಗಿ ಹೇಳಿದ್ದಾರೆ.

ಅರಬ್‌ ರಾಷ್ಟ್ರಗಳ ಒತ್ತಾಯದ ಮೇರೆಗೆ ನಾವು ಇರಾನ್‌ ಮೇಲೆ ದಾಳಿ ಮಾಡಲಿಲ್ಲ. ಬದಲಾಗಿ ಕದನ ವಿರಾಮವನ್ನು ವಿಸ್ತರಿಸಿದೆವು. ಆದರೆ ಹೆಚ್ಚುವರಿ ಸಮಯ ನೀಡಿದರೂ ಇರಾನ್‌ ಶಾಂತಿ ಮಾತುಕತೆಗೆ ಹಾಗೂ ಷರತ್ತುಗಳಿಗೆ ಒಪ್ಪದ ಹಿನ್ನೆಲೆಯಲ್ಲಿ ದಾಳಿ ಮಾಡುವುದು ಅನಿವಾರ್ಯ ಎಂದರು.

ಇರಾನ್‌ ಮೇಲೆ ಈ ಬಾರಿ ದಾಳಿ ಮತ್ತಷ್ಟು ಭೀಕರವಾಗಲಿದ್ದು, ಇದು ಎಷ್ಟು ದಿನ ಮುಂದುವರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini