Dailyhunt Logo
  • Light mode
    Follow system
    Dark mode
    • Play Story
    • App Story
ಜೆನ್ ಜಿ ಹೋರಾಟ ದೇಶ ವಿರೋಧಿಗಳಲ್ಲ: ಉಲ್ಟಾ ಹೊಡೆದ ಮೋಹನ್ ಭಾಗವತ್

ಜೆನ್ ಜಿ ಹೋರಾಟ ದೇಶ ವಿರೋಧಿಗಳಲ್ಲ: ಉಲ್ಟಾ ಹೊಡೆದ ಮೋಹನ್ ಭಾಗವತ್

Kannadavahini 4 days ago

ವದೆಹಲಿ: ಜೆನ್ ಜಿ ಪ್ರತಿಭಟನಾಕಾರರು ದೇಶ ವಿರೋಧಗಳಲ್ಲ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಪ್ರಜಾಸತ್ತಾತ್ಮಕವಾಗಿರಬೇಕು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.

ಗುರುವಾರ ಅತೀ ದೊಡ್ಡ ಜೆನ್ ಜಿ ಮತ್ತು ಜೆನ್ ಅಲ್ಫಾ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಜೆನ್ ಜಿಗಳು ದಿಕ್ಕು ತಪ್ಪಿದ್ದಾರೆ.

ಅವರಿಗೆ ಕುಟುಂಬದವರು ತಿಳಿ ಹೇಳಬೇಕು ಎಂಬ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.

ಪ್ರತಿಭಟನೆ ಮಾಡಿದರು ಅಂತ ಅವರನ್ನು ದೇಶದ್ರೋಹಿಗಳು ಎಂದು ಕರೆಯಲು ಸಾಧ್ಯವಿಲ್ಲ. ಅವರು ನಮ್ಮ ಮುಂದಿನ ಪೀಳಿಗೆ. ಆದರೆ ಯುವ ಸಮುದಾಯದ ಜೊತೆ ನಾವು ಮಾತನಾಡಿ ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿದರು.

ಜೆನ್ ಜಿ ಪ್ರಾಮಾಣಿಕರಾಗಿದ್ದಾರೆ. ಅವರಲ್ಲಿ ದೇಶಪ್ರೇಮವಿದೆ. ಪ್ರಶ್ನೆ ಮಾಡುವ ಮನೋಭಾವ ಇದೆ. ದೇಶಕ್ಕಾಗಿ ಸೇವೆ ಮಾಡುವ ಮನೋಭಾವ ಇದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಎರಡೂ ಕಡೆಯ ಪೈಕಿ ಒಬ್ಬರಲ್ಲಿ ಇರುತ್ತದೆ. ಆದರೆ ಇಬ್ಬರೂ ಸಂಧಾನಕ್ಕೆ ಬಾರದೇ ಇದ್ದಾಗ ಕೂಗಾಡುತ್ತಾರೆ. ಹಾಗಾಗಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಸಂಘರ್ಷಕ್ಕೆ ಕಾರಣವಾಯಿತು ಎಂದು ಅವರು ವಿಶ್ಲೇಷಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Kannadavahini