Dailyhunt Logo
  • Light mode
    Follow system
    Dark mode
    • Play Story
    • App Story
ಮದ್ಯ ಸೇವಿಸಿ ಪುಣೆಯಲ್ಲಿ 17 ಮಂದಿ ಸಾವು

ಮದ್ಯ ಸೇವಿಸಿ ಪುಣೆಯಲ್ಲಿ 17 ಮಂದಿ ಸಾವು

Kannadavahini 2 days ago

ಕಲಿ ಮದ್ಯ ಸೇವಿಸಿ 17 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ.

ಹಡಪ್ಸರ್, ದಪೋಡಿ ಮತ್ತು ಫುಗೆವಾಡಿ ಎಂಬಲ್ಲಿ ಮದ್ಯ ಸೇವಿಸಿ ಒಂದೇ ದಿನ 17 ಜನರು ಮೃತಪಟ್ಟಿದ್ದು, ಹಲವರು ಗಂಭೀರ ಸ್ಥಿತಿಯಲ್ಲಿದ್ದು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಂಪ್ರಿ- ಚಿಂಚ್‌ ವಾಡ್‌ ಮತ್ತು ಪುಣೆಯ ಇತರೆ ಪ್ರದೇಶಗಳಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ಯೋಗೇಶ್ ವಾಂಖೆಡೆ ಎಂಬಾತನನ್ನು ರಾಜ್ಯ ಅಬಕಾರಿ ಇಲಾಖೆ ಬಂಧಿಸಿದೆ. ಸ್ಪಿರಿಟ್​ನಿಂದ ತಯಾರಿಸಿದ ಮದ್ಯ ಸೇವಿಸಿಯೇ ಇವರೆಲ್ಲರೂ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಹಲವಾರು ಮಂದಿಯ ಕೈವಾಡ ಇರುವುದು ತಿಳಿದು ಬಂದಿದ್ದು, ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ ಎಂದು ಗೊತ್ತಾಗಿದೆ.

ತಪ್ಪಿತಸ್ಥರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮ, ವಿಷಕಾರಿ ದೇಶಿ ಮದ್ಯವೇ ಈ ಎಲ್ಲಾ ಸಾವುಗಳಿಗೆ ಕಾರಣ. ಈ ಪ್ರದೇಶದಲ್ಲಿ ಅಕ್ರಮ ದೇಶಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಮೃತಪಟ್ಟ ಎಂಟು ಜನರಲ್ಲಿ ಐದು ಜನರು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿರುವ ಮಾಹಿತಿ ಇದೆ. ಸಾವಿಗೂ ಮುನ್ನ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರ ಬಗ್ಗೆ ವೃದ್ಯರು ದೃಢಪಡಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.

ಸಾವುಗಳಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ವಿಷಕಾರಿ ಮದ್ಯ ಸೇವಿಸಿದ್ದಾರೆಯೇ ಎಂದು ನಿರ್ಧರಿಸಲು ವೈದ್ಯಕೀಯ ವರದಿಗಳಿಗಾಗಿ ಕಾಯಲಾಗುತ್ತಿದೆ. ಮೃತರೆಲ್ಲರೂ ಒಂದೇ ಪ್ರದೇಶದವರಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannadavahini