ಇಂಫಾಲ: ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸಿ 16 ಮಂದಿ ಮೃತಪಟ್ಟಿರುವ ಘಟನೆ ಚಾಂದೇಲ್ ಜಿಲ್ಲೆಯ ಚಕ್ಪಿ ಕಾರೊಂಗ್‌ನಲ್ಲಿ ಸಂಭವಿಸಿದೆ.
ಮೆಥನಾಲ್ ವಿಷಪ್ರಾಶನದಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, 350 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಇಂಫಾಲದ ಶಿಜಾ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದಾಖಲಿಸಲಾಗಿದೆ.
ಸಾವು ಹಾಗೂ ಅಸ್ವಸ್ಥಗೊಂಡವರು ಬಹುತೇಕ ಚಾಂದೇಲ್ ಜಿಲ್ಲೆಯ ಚಕ್ಪಿ ಕಾರೊಂಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಸ್ಥಳೀಯ ನಿವಾಸಿಗಳಾಗಿದ್ದಾರೆ.
ಆಸ್ಪತ್ರೆಗೆ ಕರೆತರಲಾದವರಲ್ಲಿ ಅನೇಕರು ಮೆಥನಾಲ್ ವಿಷಬಾಧೆಗೆ ಅನುಗುಣವಾದ ಲಕ್ಷಣಗಳನ್ನು ಹೊಂದಿದ್ದರು. ಈ ವಿಷಕಾರಿ ವಸ್ತುವಿನಿಂದ ಕಲುಷಿತಗೊಂಡ ಸ್ಥಳೀಯ ಮದ್ಯವನ್ನು ಸೇವಿಸಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಶಿಜಾ ಆಸ್ಪತ್ರೆಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ತುರ್ತು ವೈದ್ಯಕೀಯ ನಿಗಾಕ್ಕೆ ರೋಗಿಗಳನ್ನು ನಿರಂತರವಾಗಿ ದಾಖಲಿಸಲಾಗುತ್ತಿದೆ. ಬಾಧಿತರನ್ನು ಹೊತ್ತ ಮತ್ತೊಂದು ಬಸ್ ಆಸ್ಪತ್ರೆಯತ್ತ ಬರುತ್ತಿದೆ ಎಂದು ವರದಿಯಾಗಿದ್ದು, ಸಾವುನೋವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಘಟನೆ ಬೆನ್ನಲ್ಲೇ ಸಿಎಂ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಶಿಜಾ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದ್ದು, ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.
👑
JOIN OUR COMMUNITY
✈️Get Latest Updates, News, Offers & More
WhatsApp Group
Telegram Channel
Facebook Group
Facebook Page
Instagram
