Dailyhunt Logo
  • Light mode
    Follow system
    Dark mode
    • Play Story
    • App Story

ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ 'ವರ್ಲ್ಡ್ ಆಫ್ ವಂಡರ್ಸ್' ಅನಾವರಣ

Kannadavahini 4 days ago

ಬೆಂಗಳೂರು: ಮಗುವಿನ ಕಲ್ಪನೆಯು ಡ್ರಾಯಿಂಗ್ ಪುಸ್ತಕವನ್ನು ದಾಟಿ ನಗರದ ಒಂದು ಭಾಗವಾದಾಗ ಏನಾಗುತ್ತದೆ? ಈ ಮಕ್ಕಳ ದಿನಾಚರಣೆಯಂದು, ಸತ್ವ ಗ್ರೂಪ್ 'ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್' ಎಂಬ ಉಪಕ್ರಮದ ಮೂಲಕ ಈ ಕಲ್ಪನೆಗೆ ಜೀವ ತುಂಬಿದೆ.

ಉತ್ತರ ಬೆಂಗಳೂರಿನಲ್ಲಿ ಸ್ವಾವಲಂಬಿ '15-ನಿಮಿಷದ ನಗರ'ವಾಗಿ ರೂಪುಗೊಳ್ಳುತ್ತಿರುವ ಸಂಸ್ಥೆಯ ಮಹತ್ವಾಕಾಂಕ್ಷೆಯ 50 ಎಕರೆ ವಿಸ್ತೀರ್ಣದ ಸಮಗ್ರ ವಸತಿ ಯೋಜನೆಯಾದ 'ಸತ್ವ ಸಿಟಿ'ಯ ಹೊರಾಂಗಣ ಜಾಹೀರಾತುಗಳಾಗಿ ಮಕ್ಕಳ ಕಲಾಕೃತಿಗಳನ್ನು ಈ ಉಪಕ್ರಮದ ಮೂಲಕ ಪರಿವರ್ತಿಸಲಾಗಿದೆ.

ಈ ಉಪಕ್ರಮವು 5-12 ವರ್ಷ ವಯಸ್ಸಿನ ಮಕ್ಕಳನ್ನು 'ಸತ್ವ ಸಿಟಿ' ಪ್ರಚಾರ ಕಥಾಹಂದರದ ಭಾಗವಾಗಿದ್ದ, ಸೈಕಲ್ ಸವಾರಿ ಮಾಡುವ ಪುಟ್ಟ ಬಾಲಕ ಆರ್ಯನ್‌ ನ ಕಥೆಯಿಂದ ಪ್ರೇರಿತವಾದ ಮೂಲ ಕಲಾಕೃತಿಗಳನ್ನು ರಚಿಸಲು ಆಹ್ವಾನಿಸಿತು.

ಪೋಷಕರು ಮತ್ತು ಪಾಲಕರು 'ವಿಸ್ಮಯ ಮತ್ತು ಕಲ್ಪನೆ'ಯ ವಿಷಯಾಧಾರಿತ ತಮ್ಮ ಮಕ್ಕಳ ಕಲಾಕೃತಿಗಳನ್ನು #SattvaCityWorldOfWonders ಹ್ಯಾಶ್‌ಟ್ಯಾಗ್ ಬಳಸಿ ಮತ್ತು ಸತ್ವ ಗ್ರೂಪ್‌ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳನ್ನು ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಸೃಜನಶೀಲತೆ, ಮೂಲಭೂತ ಕಲ್ಪನೆ ಮತ್ತು ವಿಷಯಕ್ಕೆ ಇರುವ ಪ್ರಸ್ತುತತೆಯ ಆಧಾರದ ಮೇಲೆ ಕಲಾಕೃತಿಗಳನ್ನು ಆಯ್ಕೆ ಮಾಡಲಾಯಿತು. ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ, ಆಯ್ಕೆಯಾದ ಕಲಾಕೃತಿಗಳನ್ನು ಸತ್ವ ಸಿಟಿಯ ವಿನ್ಯಾಸ ಶೈಲಿಯ ಅಂಶಗಳನ್ನು ಒಳಗೊಳ್ಳುವಂತೆ ಮಾರ್ಪಡಿಸಲಾಯಿತು ಮತ್ತು ಈ ಯೋಜನೆಯ ಸುತ್ತಲೂ ನಿರ್ಮಿಸಲು ಉದ್ದೇಶಿಸಿರುವ ಎರಡು ಹೊರಾಂಗಣ ಕಲಾ ಸ್ಥಾಪನೆಗಳಲ್ಲಿ ಪ್ರದರ್ಶಿಸಲಾಯಿತು. ಆ ಮೂಲಕ ಪುಟ್ಟ ಕಲಾವಿದರಿಗೆ ತಮ್ಮ ಸೃಷ್ಟಿಗಳು ನಗರದ ಸೌಂದರ್ಯದ ಭಾಗವಾಗುವುದನ್ನು ಕಣ್ಣಾರೆ ಕಾಣುವ ಅವಕಾಶವನ್ನು ನೀಡಲಾಯಿತು.

ಅಭಿಯಾನದ ಸಮಾರೋಪದ ಭಾಗವಾಗಿ, 8 ವರ್ಷದ ವಿಜೇತೆ ರೇಯಾ ವಿನೋದ್ ಅವರು ನವೆಂಬರ್ 15 ರಂದು ತಮ್ಮ ಕುಟುಂಬದೊಂದಿಗೆ ತಮ್ಮ ಕಲಾಕೃತಿಯನ್ನು ಒಳಗೊಂಡ ಕಲಾ ಸ್ಥಾಪನೆಗೆ ಭೇಟಿ ನೀಡಿದರು. ಕಾಗದದ ಮೇಲೆ ಮೂಡಿದ ಕಲ್ಪನೆಯೊಂದು ಸಾರ್ವಜನಿಕ ಸ್ಥಳದಲ್ಲಿ ಸ್ಥಾನ ಪಡೆದದ್ದು ಮತ್ತು ಕುಟುಂಬದವರೆಲ್ಲರೂ ಒಟ್ಟಾಗಿ ಆ ಕಲಾಕೃತಿಯನ್ನು ಕಣ್ತುಂಬಿಕೊಂಡು ಸಂಭ್ರಮಿಸಲು ಸಾಧ್ಯವಾದದ್ದು ಆ ಪುಟ್ಟ ಕಲಾವಿದೆಗೆ ಅತ್ಯಂತ ವಿಶೇಷ ಕ್ಷಣವಾಗಿತ್ತು.

ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಸತ್ವ ಗ್ರೂಪ್‌ ನ ಕಾರ್ಯತಂತ್ರ ವಿಭಾಗದ ಉಪಾಧ್ಯಕ್ಷ ಶಿವಂ ಅಗರ್ವಾಲ್ , "ಸತ್ವದಲ್ಲಿ, ನಾವು ನಿರ್ಮಿಸುವ ಸ್ಥಳಗಳು ಅಂತಿಮವಾಗಿ ಅಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುವ ಜನರಿಗೆ ಸಂಬಂಧಿಸಿವೆ ಎಂದು ನಾವು ನಂಬುತ್ತೇವೆ. ನಮ್ಮ ಮಕ್ಕಳ ದಿನಾಚರಣೆಯ ಉಪಕ್ರಮವಾದ 'ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್' ಮೂಲಕ, ಮಕ್ಕಳು ತಮ್ಮ ಕಲ್ಪನೆಯನ್ನು ವ್ಯಕ್ತಪಡಿಸಲು ಮತ್ತು ತಮ್ಮ ಸೃಜನಶೀಲತೆಯು ಅವರಿಗೆ ಸದಾ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಜೀವಂತವಾಗುವುದನ್ನು ನೋಡಲು ಒಂದು ಅವಕಾಶವನ್ನು ಕಲ್ಪಿಸಲು ನಾವು ಬಯಸಿದ್ದೆವು. ಸಾಂಪ್ರದಾಯಿಕ ಯೋಜನಾ ಪ್ರಚಾರವನ್ನು ಮೀರಿದ ಅನುಭವದಲ್ಲಿ ಕುಟುಂಬಗಳನ್ನು ತೊಡಗಿಸಿಕೊಳ್ಳುವುದು ಮತ್ತು ಮಕ್ಕಳ ಕಲಾಕೃತಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ತರುವುದು ಮನಸ್ಸಿಗೆ ಹಿತ ನೀಡುವ ವಿಷಯವಾಗಿದೆ. ಈ ಉಪಕ್ರಮವು ಯುವ ಮನಸ್ಸುಗಳನ್ನು ಮುಕ್ತವಾಗಿ ಕನಸು ಕಾಣಲು ಪ್ರೋತ್ಸಾಹಿಸುತ್ತದೆ ಮತ್ತು ಸತ್ವ ಸಿಟಿಯ ಸುತ್ತಮುತ್ತ ಬಲವಾದ ಸಮುದಾಯದ ಭಾವನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿದರು.

'ವರ್ಲ್ಡ್ ಆಫ್ ವಂಡರ್ಸ್' ಮೂಲಕ, ಸತ್ವ ಗ್ರೂಪ್ ಕುಟುಂಬಗಳು ಮತ್ತು ವಿಸ್ತಾರ ಬೆಂಗಳೂರು ಸಮುದಾಯದೊಂದಿಗೆ ಅರ್ಥಪೂರ್ಣ ಬಾಂಧವ್ಯವನ್ನು ಬೆಳೆಸುವ ಜೊತೆಗೆ ಯುವ ಮನಸ್ಸುಗಳ ಸೃಜನಶೀಲತೆಯನ್ನು ಸಂಭ್ರಮಿಸಲು ಪ್ರಯತ್ನಿಸಿತು. ನಗರದ ಸೌಂದರ್ಯದಲ್ಲಿ ಮಕ್ಕಳ ಕಲಾಕೃತಿಗಳಿಗೆ ಸ್ಥಾನ ನೀಡುವ ಮೂಲಕ, ಈ ಉಪಕ್ರಮವು ಸಾಂಪ್ರದಾಯಿಕ ಮಕ್ಕಳ ದಿನಾಚರಣೆಯನ್ನು ಮೀರಿ ಕಲ್ಪನೆ, ಕುಟುಂಬಗಳು ಮತ್ತು ಸಮುದಾಯವನ್ನು ಒಗ್ಗೂಡಿಸುವ ಒಂದು ಸಾಮೂಹಿಕ ಅನುಭವವನ್ನು ಸೃಷ್ಟಿಸಿದೆ.

👑
JOIN OUR COMMUNITY
✈️Get Latest Updates, News, Offers & More


WhatsApp Group


Telegram Channel


Facebook Group


Facebook Page


Instagram

Dailyhunt
Disclaimer: This content has not been generated, created or edited by Dailyhunt. Publisher: Kannadavahini