ಕೇಂದ್ರ ಸರ್ಕಾರ ಇಪಿಎಫ್ ಒ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಏರಿಕೆ ಮಾಡಿದೆ. 3 ವರ್ಷಗಳಲ್ಲಿ ಮೊದಲ ಬಾರಿ ಭಾರೀ ಏರಿಕೆ ಮಾಡಿದ ಕೇಂದ್ರ ಸರ್ಕಾರ ಸಣ್ಣ ಉಳಿತಾಯದಾರರಿಗೆ ಸಿಹಿ ಸುದ್ದಿ ನೀಡಿದೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಿರಿಯ ನಾಗರಿಕರು ಹಾಗೂ ಸಣ್ಣ ಉಳಿತಾಯದಾರರನ್ನು ಗಮನಿಸಿ ಪಿಎಫ್ ಬಡ್ಡಿದರದಲ್ಲಿ ಏರಿಕೆ ಮಾಡಿದೆ.
ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, 29 ಕೋಟಿ ಜನರ ಪೈಕಿ 6.9 ಕೋಟಿ ಜನರು ಪಿಎಫ್ ನಲ್ಲಿ ಸಕ್ರಿಯರಾಗಿದ್ದಾರೆ. ಇಪಿಎಫ್ ಒ ಬಡ್ಡಿ ಪರ ಮುಂಬರುವ ಮಾರ್ಚ್- ಏಪ್ರಿಲ್ ನಿಂದ ಜಾರಿಗೆ ಬರಲಿದೆ.
2019-2020ರಲ್ಲಿ ಇಪಿಎಫ್ ಬಡ್ಡಿ ದರ ಗರಿಷ್ಠ 8.5ಕ್ಕೆ ಏರಿಕೆಯಾಗಿತ್ತು. 2020-21ರವರೆಗೆ ಈ ದರವನ್ನು ಕಾಯ್ದುಕೊಳ್ಳಲಾಗಿತ್ತು. 2021-22ರಲ್ಲಿ ಬಡ್ಡಿದರವನ್ನು ಶೇ.8.1ಕ್ಕೆ ಇಳಿಸಲಾಗಿತ್ತು. ಇದು ಕಳೆದ 4 ದಶಕಗಳಲ್ಲೇ ಕನಿಷ್ಠ ಮಟ್ಟದ್ದಾಗಿತ್ತು.

