Dailyhunt
ಯಾವ ದಿನ ತುಪ್ಪದ ದೀಪ ಹಚ್ಚಿದರೆ ಯಾವ ದೋಷ ದೂರಾಗಿ ಶುಭಫಲ ಪ್ರಾಪ್ತಿಯಾಗುವುದು?

ಯಾವ ದಿನ ತುಪ್ಪದ ದೀಪ ಹಚ್ಚಿದರೆ ಯಾವ ದೋಷ ದೂರಾಗಿ ಶುಭಫಲ ಪ್ರಾಪ್ತಿಯಾಗುವುದು?

Kannadavahini 4 years ago

ಓಂ ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ

ತುಪ್ಪದ ದೀಪ ಹಚ್ಚುವ ಮಹತ್ವ ಯಾವ ದಿನ ತುಪ್ಪದ ದೀಪ ಹಚ್ಚಿದರೆ ಯಾವ ದೋಷ ದೂರವಾಗಿ ಯಾವ ಫಲ ಉಂಟಾಗುತ್ತದೆ ಎಂಬುದನ್ನು ಇದರಲ್ಲಿ ಹೇಳಲಾಗಿದೆ.

೧.

"ತುಪ್ಪದ ದೀಪಗಳನ್ನು" ಸುಬ್ರಹ್ಮಣ್ಯ ಸ್ವಾಮಿ, ಸರ್ಪದೇವತೆಗಳ ಮುಂದೆ ಹಚ್ಚಿದರೆ , ಆ ಕುಟುಂಬದವರಿಗೆ ಎಂದೂ ಸರ್ಪದೋಷಗಳು ಬರುವುದುಲ್ಲ..!
೨. "ಮಹಾಗಣಪತಿಗೆ" ೨೧ ದಿನ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತವೆ‌..

೩. ದೇವಿ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ "ತುಪ್ಪದ ದೀಪ" ಹಚ್ಚಿ ಪ್ರಾರ್ಥಿಸಿದರೆ "ಕುಜದೋಷ" ನಿವಾರಣೆಯಾಗುತ್ತದೆ..
ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

೩. ಶ್ರೀಚಕ್ರ ದೇವತೆಗಳಿಗೆ, ಗಾಯತ್ರೀದೇವಿಗೆ, ಕಾಮಾಕ್ಷಿ ದೇವಿಗೆ, ಮೀನಾಕ್ಷಿ ದೇವಿ, ತ್ರಿಪುರಸುಂದರಿ ದೇವಿ .. ಇತ್ಯಾದಿ ದೇವತೆಗಳಿಗೆ "ತುಪ್ಪದ ದೀಪ" ಹಚ್ಚಿದರೆ "ನೆನೆದ ಕಾರ್ಯಗಳು" ಕ್ಷಿಪ್ರವಾಗಿ ನೆರವೇರುತ್ತವೆ..!

೫. ಸೋಮವಾರ ದಿವಸ "ಶ್ರೀ ರಾಮಚಂದ್ರ" ದೇವರಿಗೆ "ತುಪ್ಪದ ದೀಪ" ಹಚ್ಚಿ ಯಾರು ಪೂಜಿಸುತ್ತಾರೋ , ಅವರ ಮನೆಯಲ್ಲಿ ಅಣ್ಣ ತಮ್ಮಂದಿರ ಕಲಹಗಳು ಇರುವುದಿಲ್ಲ..!

೬. " ನೀವು ಹುಟ್ಟಿದ ನಕ್ಷತ್ರ ದಿವಸ "ಶ್ರೀ ಕೃಷ್ಣನಿಗೆ" ತುಪ್ಪದ ದೀಪ ಹಚ್ಚಿ , "ಶ್ರೀ ಕೃಷ್ಣ ಸಹಸ್ರನಾಮ" ಹೇಳುತ್ತಾರೋ, ಅವರಿಗೆ ಪುತ್ರ ಸಂತಾನವಾಗುತ್ತದೆ..!
ಮಕ್ಕಳಿರುವವರು ಓದಿದರೆ ಮಕ್ಕಳು ಆರೋಗ್ಯವಾಗಿದ್ದು ಸನ್ಮಾರ್ಗದಲ್ಲಿ ನಡೆಯುತ್ತಾರೆ‌..!

೭. ಯಾರಿಗೆ ಮಕ್ಕಳು ಆಗಿ ಸಾವನ್ನಪ್ಪುತ್ತಿರುತ್ತವೋ ಮತ್ತು ಮಕ್ಕಳು ಬದುಕುವುದಿಲ್ಲವೋ, ಅಂಥವರು "ಸಂತಾನ ಗೋಪಾಲಕೃಷ್ಣ" ಸ್ವಾಮಿಗೆ, ತುಪ್ಪದ ದೀಪವನ್ನು ಹಚ್ಚಿ, "ಸಂತಾನಗೋಪಾಲಕೃಷ್ಣ" ಸ್ವಾಮಿ‌ಯ ಮೂಲಮಂತ್ರವನ್ನು ಭಕ್ತಿಯಿಂದ "ಜಪ" ಮಾಡಿದರೆ, ಅವರಿಗೆ "ಒಂದು ವರ್ಷದ ಒಳಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮಗುವು ಆಯುಷ್ಯವಂತನಾಗಿ ಇರುತ್ತಾರೆ.!

೮. " ಸ್ತ್ರೀ ಸಂತಾನ" ಬೇಕೆಂದು ಅಪೇಕ್ಷೆ ಪಡುವವರು, "ಶ್ರೀ ದುರ್ಗಾ ಸಪ್ತಶತಿ" ಪಾರಾಯಣ ಮಾಡುವಾಗ "ತುಪ್ಪದದೀಪ" ಹಚ್ಚಿ ಪ್ರಾರ್ಥನೆಯನ್ನು ಮಾಡುತ್ತಾರೋ ಅವರಿಗೆ, ಸಂವತ್ರದೊಳಗೆ ದೈವಭಕ್ತಳಾದ "ಸ್ತ್ರೀ" ಸಂತಾನವಾಗುತ್ತದೆ.!

೯. ಯಾರಿಗೆ "ಸಂತಾನಭಾಗ್ಯ" ಇರುವುದಿಲ್ಲವೋ , ಅಂಥವರು " ಶ್ರೀ ಷಷ್ಠೀದೇವತೆ" ಪೂಜೆ ಮಾಡಿ , ತುಪ್ಪದ ದೀಪ ಹಚ್ಚಿ, ಷೋಡಶೋಪಚಾರ ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ, ದೈವಸಂಕಲ್ಪದಿಂದ ಸಂತಾನಭಾಗ್ಯವಾಗುತ್ತದೆ.

೧೦. ಇಷ್ಟದೇವತೆ ಮತ್ರು ಕುಲದೇವತೆಯ ಮುಂದೆ ಯಾರು ತುಪ್ಪದ ದೀಪ ಹಚ್ಚಿ ಪೂಜಿಸುತ್ತಾರೋ, ಅವರ ಮನೆಯು ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ..

೧೧. ಗುರುವಾರ ಗೋಧೂಳಿ ಸಮಯದಲ್ಲಿ ದೇವಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ, ಅವರಿಗಿರುವ ಸಕಲ ಶತೃಕಾಟವು ನಿವಾರಣೆಯಾಗುತ್ತದೆ.. ಸಕಲ ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ..

೧೨. ಆಶ್ವೀಜ ಮಾಸ , ಕೃಷ್ಣಪಕ್ಷ, ಅಮವಾಸ್ಯೆಯ ದಿವಸ(ದೀಪಾವಳಿ ಅಮಾವಾಸ್ಯೆ) ಯಲ್ಲಿ ಯಾರು ಸಾಯಂಕಾಲ "ಗೋಧೂಳಿ" ಲಗ್ನದಲ್ಲಿ "ಶ್ರೀಮಹಾಲಕ್ಷ್ಮೀ" ದೇವಿಗೆ ತುಪ್ಪದ ದೀಪ ಹಚ್ಚಿ , ಶಾಸ್ತ್ರೋಕ್ತವಾಗಿ ಪೂಜಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿ, ಮಕ್ಕಳಿಗೆ ಹಂಚುತ್ತಾರೋ, ಅಂಥವರಿಗೆ ಮತ್ತು ಆ ಮನೆಯವರಿಗೆ, ವರ್ಷಪೂರ್ತಿ ಹಣಕಾಸಿನ ಸಮಸ್ಯೆ ಬರದೆ ನೆಮ್ಮದಿಯಾಗಿ ಜೀವನ ಮಾಡುತ್ತಾರೆ.
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

Dailyhunt
Disclaimer: This content has not been generated, created or edited by Dailyhunt. Publisher: Kannadavahini