Monday, 21 Sep, 9.23 am Karnataka News Online

ಪ್ರಾದೇಶಿಕ ಸುದ್ದಿ
ಕರಾವಳಿಯಲ್ಲಿ ವರುಣನ ಆರ್ಭಟ; ಉಡುಪಿ ಕೃಷ್ಣಮಠಕ್ಕೂ ನುಗ್ಗಿದ ನೀರು

ಉಡುಪಿ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳು ವರುಣನ ಆರ್ಭಟಕ್ಕೆ ನಲುಗಿ ಹೋಗಿವೆ. ಧಾರಾಕಾರ ಮಳೆಗೆ ಇದೇ ಮೊದಲ ಉಡುಪಿಯ ಶ್ರೀ ಕೃಷ್ಣಮಠದ ಆವರಣ ಮುಳುಗಡೆಯಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಉಡುಪಿಯಲ್ಲಿ ಕಳೆದ 24 ತಾಸುಗಳಲ್ಲಿ 316 ಮಿಲಿ ಮೀಟರ್ ಮಳೆಯಾಗಿದೆ. ಸ್ವರ್ಣಾ, ಸೀತಾ, ಮಡಿಸಾಲು, ಉದ್ಯಾವರ, ಶಾಂಭವಿ, ಪಾಪನಾಶಿನಿ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಕರಾವಳಿ ಜಿಲ್ಲ್ಗಳ ಜನರು ಅಕ್ಷರಶ: ಪ್ರವಾಹ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಇಂದ್ರಾಣಿ ನದಿಯ ರೌದ್ರ ನರ್ತನದಿಂದ ಉಡುಪಿ ಕೃಷ್ಣಮಠದ ರಾಜಾಂಗಣ, ಪಾರ್ಕಿಂಗ್ ಏರಿಯಾ ಸಂಪೂರ್ಣ ಜಲಾವೃತವಾಗಿದೆ. ಮಠದ ಗೀತಾ ಮಂದಿರ, ಭೋಜನಶಾಲೆ ಸುತ್ತಲೂ ನೀರು ತುಂಬಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Karnataka News Online
Top