Saturday, 08 Aug, 8.39 pm Karnataka TV

ವಾಣಿಜ್ಯ
ಆಗಸ್ಟ್ 9, 2020 ರಾಶಿ ಭವಿಷ್ಯ

ಮೇಷ: ಉದ್ಯೋಗಿಗಳಿಗೆ ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸಕ್ಕೆ ಕಾರಣವಾದೀತು. ಮನೆಯಲ್ಲಿ ದೇವತಾನುಗ್ರಹಕ್ಕಾಗಿ ದೇವತಾ ಕಾರ್ಯಗಳು ನೆರವೇರಲಿದೆ. ಆಕಸ್ಮಿಕ ಕಿರುಸಂಚಾರವಿದ್ದೀತು.

ವೃಷಭ: ಸಾಮಾಜಿಕ ವಲಯದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಆಕಾಂಕ್ಷೆಗಳನ್ನ ಸದ್ಯದ ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ.

ಮಿಥುನ: ಆಗಾಗ ಧನಾಗಮನದಿಂದ ಮನಸ್ಸಿಗೆ ಕೊಂಚ ಸಮಾಧಾನ ದೊರಕಲಿದೆ. ಅವಿವಾಹಿತರಿಗೆ ಹೆಚ್ಚಿನ ಪ್ರಯತ್ನದಿಂದ ಕಂಕಣಬಲದ ಯೋಗ ಒದಗಿ ಬರಲಿದೆ. ಕೌಟುಂಬಿಕವಾಗಿ ಖರ್ಚು ವೆಚ್ಚ ಅಧಿಕವಾದೀತು.

ಕರ್ಕ: ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ ತೋರಿಬಂದು, ಆರ್ಥಿಕವಾಗಿ ತುಸುಮಟ್ಟಿನ ಲಾಭವಿದೆ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ನಿಮ್ಮದಾದೀತು. ಇತರರ ಕಿವಿ ಮಾತಿಗೆ ತಲೆಗೊಡದಿರಿ. ಜಾಗೃತೆ ಮಾಡಿರಿ.

ಸಿಂಹ: ವೃತ್ತಿರಂಗದಲ್ಲಿ ಹಿತಶತ್ರುಗಳ ಕಿರಿಕಿರಿ ಇರುತ್ತದೆ. ಅವಿವಾಹಿತರಿಗೆ ನಿಶ್ಚಿತರೂಪದಲ್ಲಿ ಕಂಕಣಬಲ ತೋರಿಬರಲಿದೆ. ಕುಟುಂಬ ಸಂಬಂಧವನ್ನು ಗಟ್ಟಿಯಾಗಿಡಲು ಪ್ರಯತ್ನಿಸಿ. ವಿದ್ಯೆಯಲ್ಲಿ ಯಶಸ್ಸು.

ಕನ್ಯಾ: ನಾನಾ ರೀತಿಯಲ್ಲಿ ಧನಸಂಗ್ರಹಕ್ಕೆ ಸಾಧ್ಯವಾಗಲಿದೆ. ಯಾವುದೇ ರೀತಿಯ ಮನಸ್ಥಾಪಕ್ಕೆ ಗುರಿಯಾಗುವ ಸಾಧ್ಯತೆ ತೋರಿಬಂದೀತು. ಭವಿಷ್ಯದ ಕರ್ತವ್ಯದ ಕಡೆಗೆ, ಗಮನಹರಿಸುವುದು ಮುಖ್ಯವಾಗಿದೆ.

ತುಲಾ: ಉದ್ಯೋಗಿಗಳಿಗೆ ಅವಿರತ ಕೆಲಸ ಬಿಸಿ ತಟ್ಟಲಿದೆ. ಕುಟುಂಬದ ಕಡೆಗೆ ಖರ್ಚುವೆಚ್ಚಗಳು ಅಧಿಕವಾಗಿ ತೋರಿಬರಲಿದೆ. ವೃತ್ತಿರಂಗದಲ್ಲಿ ನಿರುತ್ಸಾಹದ ವಾತಾವರಣವು ಕಂಡುಬರಲಿದೆ.

ವೃಶ್ಚಿಕ: ಉತ್ತಮ ಉತ್ಸಾಹದಾಯಕ ದಿನಗಳಿವು. ವಿಲಾಸಿ ಜೀವನದ ಖುಷಿಯನ್ನ ಅನುಭವಿಸಲಿದ್ದೀರಿ. ಭೂ ಖರೀದಿ, ಗೃಹನಿರ್ಮಾಣಗಳಿಗೆ ಇದು ಸಕಾಲವಾಗಿದೆ. ಸದುಪಯೋಗಿಸಿರಿ ದಿನಾಂತ್ಯ ಶುಭವಾರ್ತೆ.

ಧನು: ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುಕ್ತಾಯಗೊಂಡಾವು. ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಅವಿವಾಹಿತರು ಪ್ರಯತ್ನಬಲವನ್ನು ಹೆಚ್ಚಿಸಿಕೊಳ್ಳಬೇಕಾಗಿರುವುದು. ದಾಯಾದಿಗಳಿಂದ ಕಿರುಕುಳವಿದೆ.

ಮಕರ: ಸದ್ಯ ಸ್ವಪ್ರಯತ್ನ ಬಲವೇ ಉತ್ತಮವೆನ್ನಿಸಲಿದೆ. ಕಾರ್ಯಕ್ಷೇತ್ರದಲ್ಲಿ ನೆಮ್ಮದಿ ಇರದು. ಪಡೆದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿರಿ. ಯೋಗ್ಯತೆ ಮೀರಿದ ಕೆಲಗಳಿಗೆ ಕೈ ಹಾಕದಿರಿ.

ಕುಂಭ: ನೂತನ ಮಿತ್ರರ ಆಗಮನದಿಂದ ನಿಮ್ಮ ಕಾರ್ಯಸಾಧನೆ ಸಾಧ್ಯವಾದೀತು. ವೃತ್ತಿರಂಗದ ಜವಾಬ್ದಾರಿ ಮುಗಿದಿರುತ್ತದೆ. ಹೊಸ ಚಿಂತನೆಗೆ ಇದು ಸಕಾಲ. ಸದೋಪಯೋಗಿಸುವುದು ಅಗತ್ಯವಿದೆ.

ಮೀನ: ಆಗಾಗ ತಾಪತ್ರಯಗಳು ತೋರಿಬಂದರೂ ಮುನ್ನಡೆ ಇರುತ್ತದೆ. ಬಂದ ಕಷ್ಟನಷ್ಟ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವುದು ನಿಮಗೆ ಸಾಧ್ಯವಿರುತ್ತದೆ. ಧೈರ್ಯದಿಂದ ಮುನ್ನಡೆಯಿರಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Karnataka TV
Top