Dailyhunt Logo
  • Light mode
    Follow system
    Dark mode
    • Play Story
    • App Story
ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಸುಂಟರಗಾಳಿ ಖ್ಯಾತಿಯ ವಿಲನ್ ಲಲೀತಮ್ಮಾ ವೃದ್ಧಾಶ್ರಮದಲ್ಲಿ ನಿಧನ

Karnataka TV 19 hrs ago

Sandalwood: ಇಷ್ಟು ದಿನ ಅನಾರೋಗ್ಯದಿಂದ ನರಳುತ್ತಿದ್ದ ನಟಿ ಲಲೀತಮ್ಮಾ ಇಂದು ನಿಧರನಾಗಿದ್ದಾರೆ. ಇವರು ಹಲವು ದಿನಗಳಿಂದ ನಡೆಯಲು ಸಾಧ್ಯವಾಗದೇ ವ್ಹೀಲ್‌ಚೇರ್‌ ಬಳಸುತ್ತಿದ್ದರು.

65 ವರ್ಷದ ಲಲೀತಮ್ಮ ಅವರಿಗೆ ಕಳೆದ 2 ತಿಂಗಳ ಹಿಂದೆ ಸ್ಟ್ರೋಕ್ ಆಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನೋಡಿಕ"ಳ್ಳಲು ಯಾರೂ ಇರಲಿಲ್ಲ.

ಹಾಗಾಗಿ ಅಮ್ಮನ ಮಡಿಲು ಟ್ರಸ್ಟ್ ವೃದ್ಧಾಶ್ರಮದಲ್ಲಿ ಲಲೀತಮ್ಮಾ ವಾಸವಿದ್ದರು.

ನಡೆಯಲಾಗದೇ ಲಲೀತಮ್ಮಾ ವ್ಹೀಲ್ ಚೇರ್ ಸಹಾಯ ಪಡೆದಿದ್ದು, ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಅವರಿಗೆ ವೃದ್ಧಾಶ್ರಮದವರೇ ಚಿಕಿತ್ಸೆ ನೀಡುತ್ತಿದ್ದು, ಇಂದು ಚಿಕಿತ್ಸೆ ಫಲಿಸದೇ ಲಲೀತಮ್ಮಾ ಸಾವನ್ನಪ್ಪಿದ್ದಾರೆ.

ಸುಂಟರಗಾಳಿ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಲಲೀತಮ್ಮಾ ಆ ಪಾತ್ರದಿಂದಲೇ ಫೇಮಸ್ ಆಗಿದ್ದರು. ಬಳಿಕ ಲೈಫು ಇಷ್ಟೇನೆ, ಜಂಗ್ಲಿ ಸಿನಿಮಾದಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ರಂಗೋಲಿ ಸೇರಿ ಹಲವು ಧಾರಾವಾಹಿಗಳಲ್ಲಿ ಸಣ್ಣ ಪಾತ್ರಗಳನ್ನು ಲಲೀತಾ ನಿರ್ವಹಿಸಿದ್ದರು. ಇದೀಗ ಲಲೀತಮ್ಮಾ ಇಹಲೋಕ ತ್ಯಜಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnataka TV